86 : 1
وَٱلسَّمَآءِ وَٱلطَّارِقِ
ಆಕಾಶದ ಮೇಲಾಣೆ. ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದರ ಮೇಲಾಣೆ!
86 : 2
وَمَآ أَدْرَىٰكَ مَا ٱلطَّارِقُ
ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದು ಏನೆಂದು ನಿಮಗೇನು ಗೊತ್ತು?
86 : 3
ٱلنَّجْمُ ٱلثَّاقِبُ
ಅದು ಬೆಳಗುವ ನಕ್ಷತ್ರವಾಗಿದೆ.
86 : 4
إِن كُلُّ نَفْسٍ لَّمَّا عَلَيْهَا حَافِظٌ
ನಿಗಾವಣೆಯಲ್ಲಿರುವ ದೇವದೂತರಿಲ್ಲದ ಯಾವುದೇ ವ್ಯಕ್ತಿಯೂ ಇಲ್ಲ.[1]
86 : 5
فَلْيَنظُرِ ٱلْإِنسَـٰنُ مِمَّ خُلِقَ
ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನು ನೋಡಿಕೊಳ್ಳಲಿ.
86 : 6
خُلِقَ مِن مَّآءٍ دَافِقٍ
ಅವನನ್ನು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿದೆ.
86 : 7
يَخْرُجُ مِنۢ بَيْنِ ٱلصُّلْبِ وَٱلتَّرَآئِبِ
ಅದು ಬೆನ್ನು ಮತ್ತು ಪಕ್ಕೆಲುಬುಗಳ ನಡುವಿನಿಂದ ಹೊರಬರುತ್ತದೆ.
86 : 8
إِنَّهُۥ عَلَىٰ رَجْعِهِۦ لَقَادِرٌ
ನಿಶ್ಚಯವಾಗಿಯೂ ಅವನನ್ನು ಮರಳಿ ತರಲು (ಮರಳಿ ಸೃಷ್ಟಿಸಲು) ಅಲ್ಲಾಹನಿಗೆ ಸಾಮರ್ಥ್ಯವಿದೆ.
86 : 9
يَوْمَ تُبْلَى ٱلسَّرَآئِرُ
ಮರೆಯಾಗಿರುವ ರಹಸ್ಯಗಳನ್ನು ತನಿಖೆ ಮಾಡಲಾಗುವ ದಿನ![1]
86 : 10
فَمَا لَهُۥ مِن قُوَّةٍ وَلَا نَاصِرٍ
ಆಗ ಮನುಷ್ಯನ ಬಳಿ ಯಾವುದೇ ಶಕ್ತಿ ಅಥವಾ ಸಹಾಯಕರು ಇರುವುದಿಲ್ಲ.
86 : 11
وَٱلسَّمَآءِ ذَاتِ ٱلرَّجْعِ
ಮಳೆಯನ್ನು ಸುರಿಸುವ ಆಕಾಶದ ಮೇಲಾಣೆ!
86 : 12
وَٱلْأَرْضِ ذَاتِ ٱلصَّدْعِ
ಸೀಳುವ ಭೂಮಿಯ ಮೇಲಾಣೆ!
86 : 13
إِنَّهُۥ لَقَوْلٌ فَصْلٌ
ನಿಶ್ಚಯವಾಗಿಯೂ ಇದು (ಕುರ್‌ಆನ್) ನಿರ್ಣಾಯಕ ಮಾತಾಗಿದೆ.
86 : 14
وَمَا هُوَ بِٱلْهَزْلِ
ಇದು ಹಾಸ್ಯದ ಮಾತುಗಳಲ್ಲ.
86 : 15
إِنَّهُمْ يَكِيدُونَ كَيْدًا
ನಿಶ್ಚಯವಾಗಿಯೂ ಅವರು ತಂತ್ರಗಾರಿಕೆ ಮಾಡುತ್ತಿದ್ದಾರೆ.
86 : 16
وَأَكِيدُ كَيْدًا
ನಾನು ಕೂಡ ತಂತ್ರಗಾರಿಕೆ ಮಾಡುತ್ತಿದ್ದೇನೆ.
86 : 17
فَمَهِّلِ ٱلْكَـٰفِرِينَ أَمْهِلْهُمْ رُوَيْدًۢا
ಸತ್ಯನಿಷೇಧಿಗಳಿಗೆ ಕಾಲಾವಕಾಶ ನೀಡಿರಿ. ಅವರನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟುಬಿಡಿ.