70 : 1
سَأَلَ سَآئِلٌۢ بِعَذَابٍ وَاقِعٍ
ಸಂಭವಿಸಲಿರುವ ಶಿಕ್ಷೆಯ ಬಗ್ಗೆ ಕೇಳುಗನೊಬ್ಬನು ಕೇಳಿದನು.
70 : 2
لِّلْكَـٰفِرِينَ لَيْسَ لَهُۥ دَافِعٌ
ಸತ್ಯನಿಷೇಧಿಗಳಿಗೆ (ಸಂಭವಿಸುವ ಶಿಕ್ಷೆ). ಅದನ್ನು ನಿವಾರಿಸುವವರಾರೂ ಇಲ್ಲ.
70 : 3
مِّنَ ٱللَّهِ ذِى ٱلْمَعَارِجِ
ಆರೋಹಣ ದಾರಿಗಳ ಒಡೆಯನಾದ ಅಲ್ಲಾಹನಿಂದ (ಸಂಭವಿಸಲಿರುವ ಶಿಕ್ಷೆ).
70 : 4
تَعْرُجُ ٱلْمَلَـٰٓئِكَةُ وَٱلرُّوحُ إِلَيْهِ فِى يَوْمٍ كَانَ مِقْدَارُهُۥ خَمْسِينَ أَلْفَ سَنَةٍ
ಐವತ್ತು ಸಾವಿರ ವರ್ಷಗಳ ಗಾತ್ರವನ್ನು ಹೊಂದಿರುವ ಒಂದು ದಿನದಲ್ಲಿ ದೇವದೂತರು ಮತ್ತು ರೂಹ್ ಅವನ ಬಳಿಗೆ ಏರಿಹೋಗುತ್ತಾರೆ.
70 : 5
فَٱصْبِرْ صَبْرًا جَمِيلًا
ಆದ್ದರಿಂದ ನೀವು ಉತ್ತಮ ರೀತಿಯಲ್ಲಿ ತಾಳ್ಮೆ ತೋರಿರಿ.
70 : 6
إِنَّهُمْ يَرَوْنَهُۥ بَعِيدًا
ನಿಶ್ಚಯವಾಗಿಯೂ ಅವರು ಅದನ್ನು ದೂರದಲ್ಲಿರುವಂತೆ ಕಾಣುತ್ತಿದ್ದಾರೆ.
70 : 7
وَنَرَىٰهُ قَرِيبًا
ಆದರೆ ನಾವು ಅದನ್ನು ಸಮೀಪದಲ್ಲಿರುವಂತೆ ಕಾಣುತ್ತಿದ್ದೇವೆ.
70 : 8
يَوْمَ تَكُونُ ٱلسَّمَآءُ كَٱلْمُهْلِ
ಆಕಾಶವು ಎಣ್ಣೆಯ ಮಡ್ಡಿಯಂತಾಗುವ ದಿನ.
70 : 9
وَتَكُونُ ٱلْجِبَالُ كَٱلْعِهْنِ
ಪರ್ವತಗಳು ಬಣ್ಣದ ತುಪ್ಪಳದಂತಾಗುವ ದಿನ.
70 : 10
وَلَا يَسْـَٔلُ حَمِيمٌ حَمِيمًا
ಯಾವುದೇ ಒಬ್ಬ ಗೆಳೆಯನು ತನ್ನ ಆತ್ಮೀಯ ಗೆಳೆಯನ ಬಗ್ಗೆ ಕೇಳುವುದಿಲ್ಲ.
70 : 11
يُبَصَّرُونَهُمْ ۚ يَوَدُّ ٱلْمُجْرِمُ لَوْ يَفْتَدِى مِنْ عَذَابِ يَوْمِئِذٍۭ بِبَنِيهِ
ವಾಸ್ತವವಾಗಿ ಅವರನ್ನು ಪರಸ್ಪರ ತೋರಿಸಲಾಗುವುದು. ಅಪರಾಧಿಯು ಆಶಿಸುವನು—ಅಂದಿನ ಶಿಕ್ಷೆಗೆ ಬದಲಿಯಾಗಿ ತನ್ನ ಗಂಡುಮಕ್ಕಳನ್ನು,
70 : 12
وَصَـٰحِبَتِهِۦ وَأَخِيهِ
ತನ್ನ ಪತ್ನಿಯನ್ನು ಮತ್ತು ಸಹೋದರನನ್ನು,
70 : 13
وَفَصِيلَتِهِ ٱلَّتِى تُـْٔوِيهِ
ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನು,
70 : 14
وَمَن فِى ٱلْأَرْضِ جَمِيعًا ثُمَّ يُنجِيهِ
ಮತ್ತು ಭೂಮಿಯಲ್ಲಿರುವ ಎಲ್ಲರನ್ನೂ ಪರಿಹಾರವಾಗಿ ನೀಡಿ ಅದು ತನ್ನನ್ನು ಪಾರು ಮಾಡುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
70 : 15
كَلَّآ ۖ إِنَّهَا لَظَىٰ
ಎಂದಿಗೂ ಇಲ್ಲ! ನಿಶ್ಚಯವಾಗಿಯೂ ಅದು ಧಗಧಗಿಸುವ ಬೆಂಕಿಯಾಗಿದೆ.
70 : 16
نَزَّاعَةً لِّلشَّوَىٰ
ತಲೆಯ ಚರ್ಮವನ್ನು ಸುಲಿಯುವಂತಹ ಬೆಂಕಿ.
70 : 17
تَدْعُوا۟ مَنْ أَدْبَرَ وَتَوَلَّىٰ
ಹಿಂದಕ್ಕೆ ಸರಿದ ಮತ್ತು ಮುಖ ತಿರುಗಿಸಿ ನಡೆದ ಎಲ್ಲರನ್ನೂ ಅದು ಕರೆಯುತ್ತದೆ.
70 : 18
وَجَمَعَ فَأَوْعَىٰٓ
(ಆಸ್ತಿಯನ್ನು) ಕೂಡಿಟ್ಟು ಜೋಪಾನವಾಗಿಟ್ಟವನನ್ನೂ (ಕರೆಯುತ್ತದೆ).
70 : 19
۞ إِنَّ ٱلْإِنسَـٰنَ خُلِقَ هَلُوعًا
ನಿಶ್ಚಯವಾಗಿಯೂ ಮನುಷ್ಯನನ್ನು ಚಿಂತಾಕ್ರಾಂತನಾಗಿ ಸೃಷ್ಟಿಸಲಾಗಿದೆ.
70 : 20
إِذَا مَسَّهُ ٱلشَّرُّ جَزُوعًا
ಅವನಿಗೆ ವಿಪತ್ತು ಸಂಭವಿಸಿದರೆ ತಾಳ್ಮೆಗೆಡುತ್ತಾನೆ.
70 : 21
وَإِذَا مَسَّهُ ٱلْخَيْرُ مَنُوعًا
ಅವನಿಗೆ ಆರಾಮ ದೊರೆತರೆ ಜಿಪುಣನಾಗುತ್ತಾನೆ.
70 : 22
إِلَّا ٱلْمُصَلِّينَ
ಆದರೆ ನಮಾಝ್ ನಿರ್ವಹಿಸುವವರು ಇದಕ್ಕೆ ಹೊರತಾಗಿದ್ದಾರೆ.
70 : 23
ٱلَّذِينَ هُمْ عَلَىٰ صَلَاتِهِمْ دَآئِمُونَ
ಅವರು ಯಾರೆಂದರೆ ತಮ್ಮ ನಮಾಝ್‌ನಲ್ಲಿ ಸ್ಥಿರವಾಗಿರುವವರು.
70 : 24
وَٱلَّذِينَ فِىٓ أَمْوَٰلِهِمْ حَقٌّ مَّعْلُومٌ
ತಮ್ಮ ಸಂಪತ್ತಿನಲ್ಲಿ ಒಂದು ನಿಶ್ಚಿತ ಹಕ್ಕು ಇರುವವರು.
70 : 25
لِّلسَّآئِلِ وَٱلْمَحْرُومِ
ಬೇಡುವವನಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವನಿಗೆ.
70 : 26
وَٱلَّذِينَ يُصَدِّقُونَ بِيَوْمِ ٱلدِّينِ
ಅವರು ಪ್ರತಿಫಲದ ದಿನವನ್ನು ಸತ್ಯವೆಂದು ದೃಢೀಕರಿಸುವವರು.
70 : 27
وَٱلَّذِينَ هُم مِّنْ عَذَابِ رَبِّهِم مُّشْفِقُونَ
ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯ ಬಗ್ಗೆ ಭಯಪಡುವವರು.
70 : 28
إِنَّ عَذَابَ رَبِّهِمْ غَيْرُ مَأْمُونٍ
ನಿಶ್ಚಯವಾಗಿಯೂ ಅವರ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಭಯಪಡದೇ ಇರುವಂತದ್ದಲ್ಲ.
70 : 29
وَٱلَّذِينَ هُمْ لِفُرُوجِهِمْ حَـٰفِظُونَ
ಅವರು ತಮ್ಮ ಗುಹ್ಯಾಂಗಗಳನ್ನು ಕಾಪಾಡಿಕೊಳ್ಳುವವರು.
70 : 30
إِلَّا عَلَىٰٓ أَزْوَٰجِهِمْ أَوْ مَا مَلَكَتْ أَيْمَـٰنُهُمْ فَإِنَّهُمْ غَيْرُ مَلُومِينَ
ಅವರ ಪತ್ನಿಯರು ಅಥವಾ ಅವರ ಬಲಗೈಗಳು ಅಧೀನದಲ್ಲಿರಿಸಿದವರನ್ನು ಬಿಟ್ಟು. ನಿಶ್ಚಯವಾಗಿಯೂ ಅವರು ಆಕ್ಷೇಪಾರ್ಹರಲ್ಲ.
70 : 31
فَمَنِ ٱبْتَغَىٰ وَرَآءَ ذَٰلِكَ فَأُو۟لَـٰٓئِكَ هُمُ ٱلْعَادُونَ
ಆದರೆ ಯಾರು ಅದಕ್ಕಿಂತ ಆಚೆಗಿರುವುದನ್ನು ಹುಡುಕುತ್ತಾರೋ ಅವರೇ ಎಲ್ಲೆ ಮೀರಿದವರು.
70 : 32
وَٱلَّذِينَ هُمْ لِأَمَـٰنَـٰتِهِمْ وَعَهْدِهِمْ رَٰعُونَ
ಅವರು ತಮ್ಮ ವಿಶ್ವಾಸಾರ್ಹತೆಗಳನ್ನು ಮತ್ತು ಕರಾರುಗಳನ್ನು ಪಾಲಿಸುವವರು.
70 : 33
وَٱلَّذِينَ هُم بِشَهَـٰدَٰتِهِمْ قَآئِمُونَ
ಅವರು ತಮ್ಮ ಸಾಕ್ಷಿಗಳಲ್ಲಿ ನೇರವಾಗಿ ನಿಲ್ಲುವವರು.
70 : 34
وَٱلَّذِينَ هُمْ عَلَىٰ صَلَاتِهِمْ يُحَافِظُونَ
ಅವರು ತಮ್ಮ ನಮಾಝ್‌ಗಳನ್ನು ಸಂರಕ್ಷಿಸುವವರು.
70 : 35
أُو۟لَـٰٓئِكَ فِى جَنَّـٰتٍ مُّكْرَمُونَ
ಅವರು ಸ್ವರ್ಗಗಳಲ್ಲಿ ಗೌರವಿಸಲ್ಪಡುವರು.
70 : 36
فَمَالِ ٱلَّذِينَ كَفَرُوا۟ قِبَلَكَ مُهْطِعِينَ
ಸತ್ಯನಿಷೇಧಿಗಳಿಗೇನಾಗಿದೆ? ಅವರೇಕೆ ನಿಮ್ಮ ಕಡೆಗೆ ಅವಸರದಿಂದ ಬರುತ್ತಿದ್ದಾರೆ?
70 : 37
عَنِ ٱلْيَمِينِ وَعَنِ ٱلشِّمَالِ عِزِينَ
ಗುಂಪು ಗುಂಪಾಗಿ ಬಲಭಾಗದಿಂದ ಮತ್ತು ಎಡಭಾಗದಿಂದ?[1]
70 : 38
أَيَطْمَعُ كُلُّ ٱمْرِئٍ مِّنْهُمْ أَن يُدْخَلَ جَنَّةَ نَعِيمٍ
ತನ್ನನ್ನು ಸುಖಸಮೃದ್ಧವಾದ ಸ್ವರ್ಗಕ್ಕೆ ಪ್ರವೇಶ ಮಾಡಿಸಬೇಕೆಂದು ಅವರಲ್ಲಿ ಪ್ರತಿಯೊಬ್ಬನೂ ಹಾರೈಸುತ್ತಾನೆಯೇ?
70 : 39
كَلَّآ ۖ إِنَّا خَلَقْنَـٰهُم مِّمَّا يَعْلَمُونَ
ಎಂದಿಗೂ ಇಲ್ಲ; ನಾವು ಅವರನ್ನು ಅವರು ತಿಳಿದಿರುವ ವಸ್ತುವಿನಿಂದಲೇ ಸೃಷ್ಟಿಸಿದ್ದೇವೆ.
70 : 40
فَلَآ أُقْسِمُ بِرَبِّ ٱلْمَشَـٰرِقِ وَٱلْمَغَـٰرِبِ إِنَّا لَقَـٰدِرُونَ
ಆದ್ದರಿಂದ ನಾನು ಪೂರ್ವಗಳ ಮತ್ತು ಪಶ್ಚಿಮಗಳ ಪರಿಪಾಲಕನ (ಅಲ್ಲಾಹನ) ಮೇಲೆ ಆಣೆ ಮಾಡುತ್ತೇನೆ. ನಿಶ್ಚಯವಾಗಿಯೂ ನಮಗೆ ಸಾಮರ್ಥ್ಯವಿದೆ.
70 : 41
عَلَىٰٓ أَن نُّبَدِّلَ خَيْرًا مِّنْهُمْ وَمَا نَحْنُ بِمَسْبُوقِينَ
ಅವರ ಬದಲಿಗೆ ಅವರಿಗಿಂತ ಶ್ರೇಷ್ಟರನ್ನು ತರಲು. ನಮ್ಮನ್ನು ಯಾರಿಗೂ ಸೋಲಿಸಲಾಗದು.
70 : 42
فَذَرْهُمْ يَخُوضُوا۟ وَيَلْعَبُوا۟ حَتَّىٰ يُلَـٰقُوا۟ يَوْمَهُمُ ٱلَّذِى يُوعَدُونَ
ಆದ್ದರಿಂದ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರು ಅನಗತ್ಯ ಮಾತುಗಳಲ್ಲಿ ಮತ್ತು ಆಟದಲ್ಲಿ ಮಗ್ನರಾಗಲಿ. ಎಲ್ಲಿಯವರೆಗೆಂದರೆ, ಅವರಿಗೆ ವಾಗ್ದಾನ ಮಾಡಲಾಗುವ ಆ ದಿನವನ್ನು ಅವರು ಭೇಟಿಯಾಗುವ ತನಕ.
70 : 43
يَوْمَ يَخْرُجُونَ مِنَ ٱلْأَجْدَاثِ سِرَاعًا كَأَنَّهُمْ إِلَىٰ نُصُبٍ يُوفِضُونَ
ಅವರು ಸಮಾಧಿಗಳಿಂದ ತರಾತುರಿಯಲ್ಲಿ ಹೊರಟುಬರುವ ದಿನ! ಅವರು ಒಂದು ಗುರಿಯೆಡೆಗೆ ವೇಗವಾಗಿ ಸಾಗುವಂತೆ.
70 : 44
خَـٰشِعَةً أَبْصَـٰرُهُمْ تَرْهَقُهُمْ ذِلَّةٌ ۚ ذَٰلِكَ ٱلْيَوْمُ ٱلَّذِى كَانُوا۟ يُوعَدُونَ
ಅವರ ಕಣ್ಣುಗಳು ತಗ್ಗಿಕೊಂಡಿರುವುವು. ಅವಮಾನವು ಅವರನ್ನು ಆವರಿಸಿಕೊಳ್ಳುವುದು. ಅದೇ ಅವರಿಗೆ ವಾಗ್ದಾನ ಮಾಡಲಾಗುತ್ತಿದ್ದ ದಿನ.