26 : 1
طسٓمٓ
ತ್ವಾ ಸೀನ್ ಮೀಮ್.
26 : 2
تِلْكَ ءَايَـٰتُ ٱلْكِتَـٰبِ ٱلْمُبِينِ
ಇವು ಸ್ಪಷ್ಟ ಗ್ರಂಥದ ವಚನಗಳಾಗಿವೆ.
26 : 3
لَعَلَّكَ بَـٰخِعٌ نَّفْسَكَ أَلَّا يَكُونُوا۟ مُؤْمِنِينَ
ಅವರು ಸತ್ಯವಿಶ್ವಾಸಿಗಳಾಗದ ಕಾರಣ ಬಹುಶಃ ನೀವು ನಿಮ್ಮ ಪ್ರಾಣವನ್ನೇ ಕಳಕೊಳ್ಳುತ್ತಿದ್ದೀರಿ.
26 : 4
إِن نَّشَأْ نُنَزِّلْ عَلَيْهِم مِّنَ ٱلسَّمَآءِ ءَايَةً فَظَلَّتْ أَعْنَـٰقُهُمْ لَهَا خَـٰضِعِينَ
ನಾವು ಇಚ್ಛಿಸಿದರೆ ಅವರಿಗೆ ಆಕಾಶದಿಂದ ಒಂದು ದೃಷ್ಟಾಂತವನ್ನು ಇಳಿಸಿಕೊಡುವೆವು. ಅದರ ಮುಂದೆ ಅವರ ಕೊರಳುಗಳು ವಿನಮ್ರವಾಗುವುವು.
26 : 5
وَمَا يَأْتِيهِم مِّن ذِكْرٍ مِّنَ ٱلرَّحْمَـٰنِ مُحْدَثٍ إِلَّا كَانُوا۟ عَنْهُ مُعْرِضِينَ
ಅವರ ಬಳಿಗೆ ಪರಮ ದಯಾಮಯನ (ಅಲ್ಲಾಹನ) ಕಡೆಯಿಂದ ಯಾವುದೇ ಹೊಸ ಉಪದೇಶವು ಬಂದಾಗಲೂ ಅವರು ಅದರಿಂದ ವಿಮುಖರಾಗುತ್ತಲೇ ಇದ್ದರು.
26 : 6
فَقَدْ كَذَّبُوا۟ فَسَيَأْتِيهِمْ أَنۢبَـٰٓؤُا۟ مَا كَانُوا۟ بِهِۦ يَسْتَهْزِءُونَ
ಅವರು ನಿಷೇಧಿಸಿದರು. ಆದ್ದರಿಂದ ಅವರು ಏನನ್ನು ತಮಾಷೆ ಮಾಡುತ್ತಿದ್ದರೋ ಅದರ ಸಮಾಚಾರವು ಸದ್ಯವೇ ಅವರ ಬಳಿಗೆ ಬರುವುದು.
26 : 7
أَوَلَمْ يَرَوْا۟ إِلَى ٱلْأَرْضِ كَمْ أَنۢبَتْنَا فِيهَا مِن كُلِّ زَوْجٍ كَرِيمٍ
ಅವರು ಭೂಮಿಯನ್ನು ನೋಡುವುದಿಲ್ಲವೇ? ನಾವು ಅದರಲ್ಲಿ ಎಲ್ಲಾ ವಿಧಗಳ ಉತ್ತಮ ಸಸ್ಯವರ್ಗಗಳಿಂದ ಎಷ್ಟೆಲ್ಲಾ ಬೆಳೆಸಿದ್ದೇವೆಂದು.
26 : 8
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
26 : 9
وَإِنَّ رَبَّكَ لَهُوَ ٱلْعَزِيزُ ٱلرَّحِيمُ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
26 : 10
وَإِذْ نَادَىٰ رَبُّكَ مُوسَىٰٓ أَنِ ٱئْتِ ٱلْقَوْمَ ٱلظَّـٰلِمِينَ
ನಿಮ್ಮ ಪರಿಪಾಲಕನು (ಅಲ್ಲಾಹು) ಮೂಸಾರನ್ನು ಕರೆದು ಹೇಳಿದ ಸಂದರ್ಭ: “ಅತಿರೇಕಿಗಳಾದ ಆ ಜನರ ಬಳಿಗೆ ಹೋಗಿರಿ.
26 : 11
قَوْمَ فِرْعَوْنَ ۚ أَلَا يَتَّقُونَ
ಫರೋಹ‍ನ ಜನರ ಬಳಿಗೆ.” ಅವರು ಅಲ್ಲಾಹನನ್ನು ಭಯಪಡುವುದಿಲ್ಲವೇ?
26 : 12
قَالَ رَبِّ إِنِّىٓ أَخَافُ أَن يُكَذِّبُونِ
ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನ್ನನ್ನು ನಿಷೇಧಿಸುವರೆಂದು ನನಗೆ ಭಯವಾಗುತ್ತಿದೆ.
26 : 13
وَيَضِيقُ صَدْرِى وَلَا يَنطَلِقُ لِسَانِى فَأَرْسِلْ إِلَىٰ هَـٰرُونَ
ನನಗೆ ಹೃದಯದಲ್ಲಿ ಇಕ್ಕಟ್ಟು ಅನುಭವವಾಗುತ್ತದೆ ಮತ್ತು ನನ್ನ ನಾಲಗೆ ಸರಿಯಾಗಿ ಚಲಿಸುವುದಿಲ್ಲ. ಆದ್ದರಿಂದ ನೀನು ಹಾರೂನರಿಗೂ ಸಂದೇಶ ಕಳುಹಿಸು.
26 : 14
وَلَهُمْ عَلَىَّ ذَنۢبٌ فَأَخَافُ أَن يَقْتُلُونِ
ಅವರಿಗೆ ನನ್ನ ಮೇಲೆ ಒಂದು ಅಪರಾಧ ಮಾಡಿದ ಆರೋಪವೂ ಇದೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂದು ನನಗೆ ಭಯವಾಗುತ್ತಿದೆ.”
26 : 15
قَالَ كَلَّا ۖ فَٱذْهَبَا بِـَٔايَـٰتِنَآ ۖ إِنَّا مَعَكُم مُّسْتَمِعُونَ
ಅಲ್ಲಾಹು ಹೇಳಿದನು: “ಸಾಧ್ಯವೇ ಇಲ್ಲ. ನೀವಿಬ್ಬರೂ ನಮ್ಮ ದೃಷ್ಟಾಂತಗಳೊಂದಿಗೆ ಹೋಗಿರಿ. ನಿಶ್ಚಯವಾಗಿಯೂ ನಾವು ಎಲ್ಲವನ್ನೂ ಕೇಳುತ್ತಾ ನಿಮ್ಮ ಜೊತೆಗಿದ್ದೇವೆ.”
26 : 16
فَأْتِيَا فِرْعَوْنَ فَقُولَآ إِنَّا رَسُولُ رَبِّ ٱلْعَـٰلَمِينَ
ನೀವು ಫರೋಹ‍ನ ಬಳಿಗೆ ಹೋಗಿರಿ. ನಂತರ ಹೇಳಿರಿ: “ನಾವು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಾಗಿದ್ದೇವೆ.
26 : 17
أَنْ أَرْسِلْ مَعَنَا بَنِىٓ إِسْرَٰٓءِيلَ
ಇಸ್ರಾಯೇಲ್ ಮಕ್ಕಳನ್ನು ನಮ್ಮ ಜೊತೆಗೆ ಕಳುಹಿಸಿಕೊಡಬೇಕು (ಎಂಬ ಆದೇಶದೊಂದಿಗೆ ಬಂದಿದ್ದೇವೆ).”
26 : 18
قَالَ أَلَمْ نُرَبِّكَ فِينَا وَلِيدًا وَلَبِثْتَ فِينَا مِنْ عُمُرِكَ سِنِينَ
ಫರೋಹ ಹೇಳಿದನು: “ನೀನು ಮಗುವಾಗಿದ್ದಾಗ ನಾವು ನಿನ್ನನ್ನು ಸಾಕಲಿಲ್ಲವೇ? ನೀನಂತೂ ನಿನ್ನ ಆಯುಷ್ಯದಲ್ಲಿ ಅನೇಕ ವರ್ಷಗಳನ್ನು ನಮ್ಮ ಜೊತೆಗೇ ಕಳೆದಿರುವೆ.
26 : 19
وَفَعَلْتَ فَعْلَتَكَ ٱلَّتِى فَعَلْتَ وَأَنتَ مِنَ ٱلْكَـٰفِرِينَ
ನಂತರ ನೀನು ನಿನ್ನ ಆ ಕೆಟ್ಟ ಕೃತ್ಯವನ್ನು ಮಾಡಿದೆ. ನಿಜಕ್ಕೂ ನೀನು ಕೃತಜ್ಞತೆಯಿಲ್ಲದವನಾಗಿದ್ದೆ.”
26 : 20
قَالَ فَعَلْتُهَآ إِذًا وَأَنَا۠ مِنَ ٱلضَّآلِّينَ
ಮೂಸಾ ಹೇಳಿದರು: “ನಾನು ಆ ಕೃತ್ಯವನ್ನು ಮಾಡಿದ್ದು ನಿಜ. ಆದರೆ ಆಗ ನಾನು ಸರಿದಾರಿಯನ್ನು ತಿಳಿಯದ ಜನರಲ್ಲಿ ಸೇರಿದ್ದೆನು.
26 : 21
فَفَرَرْتُ مِنكُمْ لَمَّا خِفْتُكُمْ فَوَهَبَ لِى رَبِّى حُكْمًا وَجَعَلَنِى مِنَ ٱلْمُرْسَلِينَ
ನಂತರ ನಿಮ್ಮ ಭಯದಿಂದ ನಾನು ನಿಮ್ಮಿಂದ ದೂರ ಓಡಿದೆನು. ನಂತರ ನನ್ನ ಪರಿಪಾಲಕನು (ಅಲ್ಲಾಹು) ನನಗೆ ವಿವೇಕವನ್ನು ದಯಪಾಲಿಸಿದನು ಮತ್ತು ನನ್ನನ್ನು ಸಂದೇಶವಾಹಕರಲ್ಲಿ ಸೇರಿಸಿದನು.
26 : 22
وَتِلْكَ نِعْمَةٌ تَمُنُّهَا عَلَىَّ أَنْ عَبَّدتَّ بَنِىٓ إِسْرَٰٓءِيلَ
ನೀನು ನನ್ನನ್ನು ಸಾಕಿ ಸಲಹಿದ್ದನ್ನು ನೀನು ನನಗೆ ಮಾಡಿದ ಉಪಕಾರವೆಂದು ಹೇಳುತ್ತಿರುವೆಯಾ? ಆದರೆ ವಾಸ್ತವವಾಗಿ, ನೀನು ಇಸ್ರಾಯೇಲ್ ಮಕ್ಕಳನ್ನು ನಿನ್ನ ಗುಲಾಮರನ್ನಾಗಿ ಮಾಡಿಕೊಂಡಿರುವೆ.”
26 : 23
قَالَ فِرْعَوْنُ وَمَا رَبُّ ٱلْعَـٰلَمِينَ
ಫರೋಹ ಕೇಳಿದನು: “ಸರ್ವಲೋಕಗಳ ಪರಿಪಾಲಕ ಎಂದರೇನು?”
26 : 24
قَالَ رَبُّ ٱلسَّمَـٰوَٰتِ وَٱلْأَرْضِ وَمَا بَيْنَهُمَآ ۖ إِن كُنتُم مُّوقِنِينَ
ಮೂಸಾ ಹೇಳಿದರು: “ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ದೃಢವಿಶ್ವಾಸವುಳ್ಳವರಾಗಿದ್ದರೆ.”
26 : 25
قَالَ لِمَنْ حَوْلَهُۥٓ أَلَا تَسْتَمِعُونَ
ಫರೋಹ ತನ್ನ ಸುತ್ತಮುತ್ತಲಿರುವ ಜನರೊಡನೆ ಕೇಳಿದನು: “ಏನು? ನೀವು ಕಿವಿಗೊಡುವುದಿಲ್ಲವೇ?”
26 : 26
قَالَ رَبُّكُمْ وَرَبُّ ءَابَآئِكُمُ ٱلْأَوَّلِينَ
ಮೂಸಾ ಹೇಳಿದರು: “ಅವನೇ ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕ.”
26 : 27
قَالَ إِنَّ رَسُولَكُمُ ٱلَّذِىٓ أُرْسِلَ إِلَيْكُمْ لَمَجْنُونٌ
ಫರೋಹ ಹೇಳಿದನು: “ನಿಮ್ಮ ಬಳಿಗೆ ಕಳುಹಿಸಲಾಗಿರುವ ಈ ನಿಮ್ಮ ಸಂದೇಶವಾಹಕ ನಿಜಕ್ಕೂ ಒಬ್ಬ ಮಾನಸಿಕ ಅಸ್ವಸ್ಥ.”
26 : 28
قَالَ رَبُّ ٱلْمَشْرِقِ وَٱلْمَغْرِبِ وَمَا بَيْنَهُمَآ ۖ إِن كُنتُمْ تَعْقِلُونَ
ಮೂಸಾ ಹೇಳಿದರು: “ಅವನೇ ಪೂರ್ವ, ಪಶ್ಚಿಮ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ಆಲೋಚಿಸುವವರಾಗಿದ್ದರೆ.”
26 : 29
قَالَ لَئِنِ ٱتَّخَذْتَ إِلَـٰهًا غَيْرِى لَأَجْعَلَنَّكَ مِنَ ٱلْمَسْجُونِينَ
ಫರೋಹ ಹೇಳಿದನು: “ನೀನು ನನ್ನನ್ನು ಬಿಟ್ಟು ಬೇರೊಬ್ಬನನ್ನು ದೇವರೆಂದು ಸ್ವೀಕರಿಸಿದರೆ ನಾನು ನಿನ್ನನ್ನು ಖಂಡಿತ ಸೆರೆಮನೆಗೆ ತಳ್ಳುವೆನು.”
26 : 30
قَالَ أَوَلَوْ جِئْتُكَ بِشَىْءٍ مُّبِينٍ
ಮೂಸಾ ಹೇಳಿದರು: “ಒಂದು ವೇಳೆ ನಾನು ನಿಮ್ಮ ಬಳಿಗೆ ಒಂದು ಸ್ಪಷ್ಟ ಸಾಕ್ಷ್ಯವನ್ನು ತಂದು ತೋರಿಸಿದರೆ (ನೀವು ನನ್ನ ಮಾತನ್ನು ನಂಬುವಿರಾ)?”
26 : 31
قَالَ فَأْتِ بِهِۦٓ إِن كُنتَ مِنَ ٱلصَّـٰدِقِينَ
ಫರೋಹ ಹೇಳಿದನು: “ಸರಿ! ತಂದು ತೋರಿಸು. ನೀನು ಸತ್ಯವಂತನಾಗಿದ್ದರೆ.”
26 : 32
فَأَلْقَىٰ عَصَاهُ فَإِذَا هِىَ ثُعْبَانٌ مُّبِينٌ
ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಅದು ತಕ್ಷಣ ಒಂದು ಸರ್ಪವಾಗಿ ಮಾರ್ಪಟ್ಟಿತು.
26 : 33
وَنَزَعَ يَدَهُۥ فَإِذَا هِىَ بَيْضَآءُ لِلنَّـٰظِرِينَ
ಅವರು ತಮ್ಮ ಕೈಯನ್ನು (ಪಾರ್ಶ್ವದಿಂದ) ಎಳೆದರು. ಆಗ ಅದು ನೋಡುಗರಿಗೆ ಬೆಳ್ಳಗೆ ಹೊಳೆಯುವಂತೆ ಕಂಡಿತು.
26 : 34
قَالَ لِلْمَلَإِ حَوْلَهُۥٓ إِنَّ هَـٰذَا لَسَـٰحِرٌ عَلِيمٌ
ಫರೋಹ ತನ್ನ ಸುತ್ತಮುತ್ತಲಿದ್ದ ಮುಖಂಡರೊಂದಿಗೆ ಹೇಳಿದನು: “ನಿಜಕ್ಕೂ ಇವನೊಬ್ಬ ಅಗಾಧ ಜ್ಞಾನವಿರುವ ಮಾಟಗಾರನಾಗಿದ್ದಾನೆ.
26 : 35
يُرِيدُ أَن يُخْرِجَكُم مِّنْ أَرْضِكُم بِسِحْرِهِۦ فَمَاذَا تَأْمُرُونَ
ತನ್ನ ಮಾಟಗಾರಿಕೆಯಿಂದ ನಿಮ್ಮನ್ನು ನಿಮ್ಮ ಊರಿನಿಂದ ಓಡಿಸುವುದು ಇವನ ಉದ್ದೇಶವಾಗಿದೆ. ಹೇಳಿ, ನೀವೇನು ಆದೇಶಿಸುತ್ತೀರಿ?”
26 : 36
قَالُوٓا۟ أَرْجِهْ وَأَخَاهُ وَٱبْعَثْ فِى ٱلْمَدَآئِنِ حَـٰشِرِينَ
ಮುಖಂಡರು ಹೇಳಿದರು: “ಇವನ ಮತ್ತು ಇವನ ಸಹೋದರನ ವಿಷಯವನ್ನು (ಸ್ವಲ್ಪ ಕಾಲ) ಮುಂದೂಡಿರಿ ಮತ್ತು (ಮಾಟಗಾರರನ್ನು) ಒಟ್ಟು ಸೇರಿಸಲು ನಗರಗಳಿಗೆ ಆಳುಗಳನ್ನು ಕಳುಹಿಸಿರಿ.
26 : 37
يَأْتُوكَ بِكُلِّ سَحَّارٍ عَلِيمٍ
ಅವರು ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ಕರೆದುಕೊಂಡು ಬರಲಿ.”
26 : 38
فَجُمِعَ ٱلسَّحَرَةُ لِمِيقَـٰتِ يَوْمٍ مَّعْلُومٍ
ನಂತರ ಒಂದು ಸುಪರಿಚಿತ ದಿನದ ನಿಶ್ಚಿತ ಸಮಯದಲ್ಲಿ ಮಾಟಗಾರರನ್ನು ಒಟ್ಟು ಸೇರಿಸಲಾಯಿತು.
26 : 39
وَقِيلَ لِلنَّاسِ هَلْ أَنتُم مُّجْتَمِعُونَ
ಪ್ರಜೆಗಳೊಡನೆ ಕೇಳಲಾಯಿತು: “ನೀವು ಕೂಡ ಒಟ್ಟುಗೂಡುತ್ತೀರಲ್ಲವೇ?
26 : 40
لَعَلَّنَا نَتَّبِعُ ٱلسَّحَرَةَ إِن كَانُوا۟ هُمُ ٱلْغَـٰلِبِينَ
ಮಾಟಗಾರರು ಗೆದ್ದರೆ ನಮಗೆ ಅವರನ್ನೇ ಹಿಂಬಾಲಿಸಬಹುದು.”
26 : 41
فَلَمَّا جَآءَ ٱلسَّحَرَةُ قَالُوا۟ لِفِرْعَوْنَ أَئِنَّ لَنَا لَأَجْرًا إِن كُنَّا نَحْنُ ٱلْغَـٰلِبِينَ
ನಂತರ ಮಾಟಗಾರರು ಬಂದಾಗ, ಅವರು ಫರೋಹ‍ನೊಡನೆ ಕೇಳಿದರು: “ನಾವು ಗೆದ್ದರೆ ನಮಗೆ ಖಂಡಿತ ಪ್ರತಿಫಲವಿದೆಯಲ್ಲವೇ?”
26 : 42
قَالَ نَعَمْ وَإِنَّكُمْ إِذًا لَّمِنَ ٱلْمُقَرَّبِينَ
ಫರೋಹ ಹೇಳಿದನು: “ಹೌದು! ನೀವು ಖಂಡಿತ ನನ್ನ ಆಪ್ತರಾಗಿ ಬಿಡುವಿರಿ.”
26 : 43
قَالَ لَهُم مُّوسَىٰٓ أَلْقُوا۟ مَآ أَنتُم مُّلْقُونَ
ಮೂಸಾ ಅವರೊಡನೆ ಹೇಳಿದರು: “ನಿಮಗೆ ಎಸೆಯಲಿರುವುದನ್ನು ಎಸೆಯಿರಿ.”
26 : 44
فَأَلْقَوْا۟ حِبَالَهُمْ وَعِصِيَّهُمْ وَقَالُوا۟ بِعِزَّةِ فِرْعَوْنَ إِنَّا لَنَحْنُ ٱلْغَـٰلِبُونَ
ಆಗ ಅವರು ಅವರ ಹಗ್ಗಗಳನ್ನು ಮತ್ತು ಕೋಲುಗಳನ್ನು ಎಸೆದರು. ಅವರು ಹೇಳಿದರು: “ಫರೋಹ‍ನ ಪ್ರತಿಷ್ಠೆಯ ಮೇಲಾಣೆ! ನಿಶ್ಚಯವಾಗಿಯೂ ನಾವೇ ಗೆಲ್ಲುವೆವು.”
26 : 45
فَأَلْقَىٰ مُوسَىٰ عَصَاهُ فَإِذَا هِىَ تَلْقَفُ مَا يَأْفِكُونَ
ಆಗ ಮೂಸಾ ತಮ್ಮ ಕೋಲನ್ನು ಎಸೆದರು. ಆಗ ಅಗೋ! ಅವರು ಕಣ್ಕಟ್ಟಾಗಿ ನಿರ್ಮಿಸಿರುವುದೆಲ್ಲವನ್ನೂ ಅದು ನುಂಗತೊಡಗಿತು.
26 : 46
فَأُلْقِىَ ٱلسَّحَرَةُ سَـٰجِدِينَ
ಆಗ ಮಾಟಗಾರರು ಸಾಷ್ಟಾಂಗ ಬಿದ್ದರು.
26 : 47
قَالُوٓا۟ ءَامَنَّا بِرَبِّ ٱلْعَـٰلَمِينَ
ಅವರು ಹೇಳಿದರು: “ನಾವು ಸರ್ವಲೋಕಗಳ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ.
26 : 48
رَبِّ مُوسَىٰ وَهَـٰرُونَ
ಮೂಸಾ ಮತ್ತು ಹಾರೂನರ ಪರಿಪಾಲಕನಲ್ಲಿ.”
26 : 49
قَالَ ءَامَنتُمْ لَهُۥ قَبْلَ أَنْ ءَاذَنَ لَكُمْ ۖ إِنَّهُۥ لَكَبِيرُكُمُ ٱلَّذِى عَلَّمَكُمُ ٱلسِّحْرَ فَلَسَوْفَ تَعْلَمُونَ ۚ لَأُقَطِّعَنَّ أَيْدِيَكُمْ وَأَرْجُلَكُم مِّنْ خِلَـٰفٍ وَلَأُصَلِّبَنَّكُمْ أَجْمَعِينَ
ಫರೋಹ ಹೇಳಿದನು: “ನಾನು ಅಪ್ಪಣೆ ಕೊಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಅವನು ನಿಮಗೆ ಮಾಟಗಾರಿಕೆಯನ್ನು ಕಲಿಸಿಕೊಟ್ಟ ನಿಮ್ಮ ಮುಖಂಡನಾಗಿದ್ದಾನೆ. ನೀವು ಸದ್ಯವೇ ತಿಳಿಯುವಿರಿ. ಖಂಡಿತವಾಗಿಯೂ ನಾನು ನಿಮ್ಮ ಕೈ-ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.
26 : 50
قَالُوا۟ لَا ضَيْرَ ۖ إِنَّآ إِلَىٰ رَبِّنَا مُنقَلِبُونَ
ಮಾಟಗಾರರು ಹೇಳಿದರು: “ಪರವಾಗಿಲ್ಲ. ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವೆವು.
26 : 51
إِنَّا نَطْمَعُ أَن يَغْفِرَ لَنَا رَبُّنَا خَطَـٰيَـٰنَآ أَن كُنَّآ أَوَّلَ ٱلْمُؤْمِنِينَ
ನಾವು ಮೊತ್ತಮೊದಲು ವಿಶ್ವಾಸವಿಟ್ಟ ಜನರಾಗಿರುವುದರಿಂದ ನಮ್ಮ ಪರಿಪಾಲಕನು (ಅಲ್ಲಾಹು) ನಮ್ಮ ಪಾಪಗಳನ್ನು ಕ್ಷಮಿಸುವನೆಂದು ನಮಗೆ ಭರವಸೆಯಿದೆ.”
26 : 52
۞ وَأَوْحَيْنَآ إِلَىٰ مُوسَىٰٓ أَنْ أَسْرِ بِعِبَادِىٓ إِنَّكُم مُّتَّبَعُونَ
ನಾವು ಮೂಸಾರಿಗೆ ದೇವವಾಣಿಯನ್ನು ನೀಡಿದೆವು: “ನೀವು ರಾತ್ರೋರಾತ್ರಿ ನನ್ನ ದಾಸರೊಡನೆ ಹೊರಡಿ. ಖಂಡಿತವಾಗಿಯೂ ಅವರು ನಿಮ್ಮನ್ನು ಹಿಂಬಾಲಿಸಿ ಬರುವರು.”
26 : 53
فَأَرْسَلَ فِرْعَوْنُ فِى ٱلْمَدَآئِنِ حَـٰشِرِينَ
ಆಗ ಫರೋಹ ಎಲ್ಲಾ ಪಟ್ಟಣಗಳಿಗೂ ಸೈನಿಕರನ್ನು ಕಳುಹಿಸಿದನು.
26 : 54
إِنَّ هَـٰٓؤُلَآءِ لَشِرْذِمَةٌ قَلِيلُونَ
“ನಿಜಕ್ಕೂ ಇವರೊಂದು ಚಿಕ್ಕ ಸಂಖ್ಯೆಯ ಜನರು.
26 : 55
وَإِنَّهُمْ لَنَا لَغَآئِظُونَ
ಆದರೂ ಇವರು ನಮ್ಮನ್ನೇ ರೇಗಿಸುತ್ತಿದ್ದಾರೆ.
26 : 56
وَإِنَّا لَجَمِيعٌ حَـٰذِرُونَ
ನಿಶ್ಚಯವಾಗಿಯೂ ನಾವು ದೊಡ್ಡ ಸಂಖ್ಯೆಯಲ್ಲಿದ್ದು (ಇವರ ಪಿತೂರಿಯನ್ನು ಸೋಲಿಸಲು) ಸದಾ ಎಚ್ಚರವಾಗಿರಬೇಕಾಗಿದೆ.”
26 : 57
فَأَخْرَجْنَـٰهُم مِّن جَنَّـٰتٍ وَعُيُونٍ
ಕೊನೆಗೆ ನಾವು ಅವರನ್ನು ತೋಟಗಳಿಂದ ಮತ್ತು ನೀರಿನ ತೊರೆಗಳಿಂದ ಹೊರಹಾಕಿದೆವು.
26 : 58
وَكُنُوزٍ وَمَقَامٍ كَرِيمٍ
ಖಜಾನೆಗಳಿಂದ ಮತ್ತು ಉನ್ನತ ಸ್ಥಾನಮಾನಗಳಿಂದ.
26 : 59
كَذَٰلِكَ وَأَوْرَثْنَـٰهَا بَنِىٓ إِسْرَٰٓءِيلَ
ಇದೇ ರೀತಿ. ನಂತರ ನಾವು ಇಸ್ರಾಯೇಲ್ ಮಕ್ಕಳನ್ನು ಆ ಎಲ್ಲಾ ವಸ್ತುಗಳ ವಾರೀಸುದಾರರನ್ನಾಗಿ ಮಾಡಿದೆವು.
26 : 60
فَأَتْبَعُوهُم مُّشْرِقِينَ
ಫರೋಹ ಮತ್ತು ಸೈನ್ಯವು ಸೂರ್ಯೋದಯವಾಗುತ್ತಿದ್ದಂತೆ ಅವರನ್ನು ಬೆನ್ನಟ್ಟಿದರು.
26 : 61
فَلَمَّا تَرَٰٓءَا ٱلْجَمْعَانِ قَالَ أَصْحَـٰبُ مُوسَىٰٓ إِنَّا لَمُدْرَكُونَ
ನಂತರ ಎರಡು ಗುಂಪುಗಳು ಪರಸ್ಪರ ಮುಖಾಮುಖಿಯಾದಾಗ ಮೂಸಾರ ಜೊತೆಗಿದ್ದವರು ಹೇಳಿದರು: “ಅಯ್ಯೋ! ನಾವು ಸಿಕ್ಕಿಬಿದ್ದೆವು.”
26 : 62
قَالَ كَلَّآ ۖ إِنَّ مَعِىَ رَبِّى سَيَهْدِينِ
ಮೂಸಾ ಹೇಳಿದರು: “ಸಾಧ್ಯವೇ ಇಲ್ಲ. ನನ್ನ ಪರಿಪಾಲಕ (ಅಲ್ಲಾಹು) ನನ್ನ ಜೊತೆಯಲ್ಲೇ ಇದ್ದಾನೆ. ಅವನು ನನಗೆ ಖಂಡಿತ ದಾರಿ ತೋರಿಸುತ್ತಾನೆ.”
26 : 63
فَأَوْحَيْنَآ إِلَىٰ مُوسَىٰٓ أَنِ ٱضْرِب بِّعَصَاكَ ٱلْبَحْرَ ۖ فَٱنفَلَقَ فَكَانَ كُلُّ فِرْقٍ كَٱلطَّوْدِ ٱلْعَظِيمِ
ಆಗ ನಾವು ಮೂಸಾರಿಗೆ, “ನಿಮ್ಮ ಕೋಲಿನಿಂದ ಸಮುದ್ರಕ್ಕೆ ಬಡಿಯಿರಿ” ಎಂದು ದೇವವಾಣಿ ನೀಡಿದೆವು. ಆಗ ಸಮುದ್ರವು ಇಬ್ಭಾಗವಾಯಿತು. ಅದರ ಒಂದೊಂದು ಭಾಗವು ಬೃಹತ್ ಪರ್ವತದಂತೆ ನಿಂತಿತು.
26 : 64
وَأَزْلَفْنَا ثَمَّ ٱلْـَٔاخَرِينَ
ನಾವು ಇತರರನ್ನು (ಫರೋಹ‍ನ ಜನರನ್ನು) ಕೂಡ ಅದರ ಸಮೀಪಕ್ಕೆ ತಂದೆವು.
26 : 65
وَأَنجَيْنَا مُوسَىٰ وَمَن مَّعَهُۥٓ أَجْمَعِينَ
ನಾವು ಮೂಸಾ ಮತ್ತು ಅವರ ಜೊತೆಗಿದ್ದ ಎಲ್ಲರನ್ನೂ ರಕ್ಷಿಸಿದೆವು.
26 : 66
ثُمَّ أَغْرَقْنَا ٱلْـَٔاخَرِينَ
ನಂತರ ಇತರರನ್ನು (ಫರೋಹ‍ ಮತ್ತು ಅವನ ಜನರನ್ನು) ಮುಳುಗಿಸಿ ಬಿಟ್ಟೆವು.
26 : 67
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
26 : 68
وَإِنَّ رَبَّكَ لَهُوَ ٱلْعَزِيزُ ٱلرَّحِيمُ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
26 : 69
وَٱتْلُ عَلَيْهِمْ نَبَأَ إِبْرَٰهِيمَ
ಅವರಿಗೆ ಇಬ್ರಾಹೀಮರ ಸಮಾಚಾರವನ್ನು ಓದಿಕೊಡಿ.
26 : 70
إِذْ قَالَ لِأَبِيهِ وَقَوْمِهِۦ مَا تَعْبُدُونَ
ಅವರು ತಮ್ಮ ತಂದೆಯೊಂದಿಗೆ ಮತ್ತು ತಮ್ಮ ಜನರೊಂದಿಗೆ “ನೀವು ಏನನ್ನು ಆರಾಧಿಸುತ್ತಿದ್ದೀರಿ?” ಎಂದು ಕೇಳಿದ ಸಂದರ್ಭ.
26 : 71
قَالُوا۟ نَعْبُدُ أَصْنَامًا فَنَظَلُّ لَهَا عَـٰكِفِينَ
ಅವರು ಹೇಳಿದರು: “ನಾವು ವಿಗ್ರಹಗಳನ್ನು ಆರಾಧಿಸುತ್ತಿದ್ದೇವೆ ಮತ್ತು ಅವುಗಳ ಮುಂದೆ ಧ್ಯಾನ ಮಾಡುತ್ತಾ ಕೂರುತ್ತೇವೆ.”
26 : 72
قَالَ هَلْ يَسْمَعُونَكُمْ إِذْ تَدْعُونَ
ಇಬ್ರಾಹೀಮ್ ಕೇಳಿದರು: “ನೀವು ಅವರನ್ನು ಕರೆದು ಪ್ರಾರ್ಥಿಸಿದರೆ ಅವರಿಗೆ ಕೇಳುತ್ತದೆಯೇ?
26 : 73
أَوْ يَنفَعُونَكُمْ أَوْ يَضُرُّونَ
ಅಥವಾ ಅವರು ನಿಮಗೆ ಉಪಕಾರ ಅಥವಾ ತೊಂದರೆ ಮಾಡುತ್ತಾರೆಯೇ?”
26 : 74
قَالُوا۟ بَلْ وَجَدْنَآ ءَابَآءَنَا كَذَٰلِكَ يَفْعَلُونَ
ಅವರು ಹೇಳಿದರು: “(ಅದರ ಬಗ್ಗೆ ನಮಗೇನೂ ತಿಳಿದಿಲ್ಲ). ಆದರೆ ನಮ್ಮ ಪೂರ್ವಜರು ಹೀಗೆ ಮಾಡುತ್ತಾ ಬಂದಿದ್ದನ್ನು ನಾವು ನೋಡಿದ್ದೇವೆ.”
26 : 75
قَالَ أَفَرَءَيْتُم مَّا كُنتُمْ تَعْبُدُونَ
ಇಬ್ರಾಹೀಮ್ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ ಎಂದು ನೀವು ಆಲೋಚಿಸಿ ನೋಡಿದ್ದೀರಾ?
26 : 76
أَنتُمْ وَءَابَآؤُكُمُ ٱلْأَقْدَمُونَ
ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು?
26 : 77
فَإِنَّهُمْ عَدُوٌّ لِّىٓ إِلَّا رَبَّ ٱلْعَـٰلَمِينَ
ನಿಶ್ಚಯವಾಗಿಯೂ ಅವರು (ಆ ದೇವರುಗಳು) ನನ್ನ ವೈರಿಗಳಾಗಿದ್ದಾರೆ; ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಹೊರತು.
26 : 78
ٱلَّذِى خَلَقَنِى فَهُوَ يَهْدِينِ
ಅವನು (ಅಲ್ಲಾಹು) ಯಾರೆಂದರೆ, ನನ್ನನ್ನು ಸೃಷ್ಟಿಸಿ ನನಗೆ ದಾರಿ ತೋರಿಸಿದವನು.
26 : 79
وَٱلَّذِى هُوَ يُطْعِمُنِى وَيَسْقِينِ
ನನಗೆ ಆಹಾರ-ಪಾನೀಯಗಳನ್ನು ನೀಡುವವನು.
26 : 80
وَإِذَا مَرِضْتُ فَهُوَ يَشْفِينِ
ನನಗೆ ಕಾಯಿಲೆ ಬಂದರೆ ಅವನು ಅದನ್ನು ಗುಣಪಡಿಸುತ್ತಾನೆ.
26 : 81
وَٱلَّذِى يُمِيتُنِى ثُمَّ يُحْيِينِ
ಅವನು ನನ್ನನ್ನು ಮೃತಪಡಿಸುತ್ತಾನೆ, ನಂತರ ನನಗೆ ಪುನಃ ಜೀವ ನೀಡುತ್ತಾನೆ.
26 : 82
وَٱلَّذِىٓ أَطْمَعُ أَن يَغْفِرَ لِى خَطِيٓـَٔتِى يَوْمَ ٱلدِّينِ
ಅವನು ಯಾರೆಂದರೆ, ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸುವನೆಂದು ನಾನು ಭರವಸೆಯಿಟ್ಟವನು.
26 : 83
رَبِّ هَبْ لِى حُكْمًا وَأَلْحِقْنِى بِٱلصَّـٰلِحِينَ
ನನ್ನ ಪರಿಪಾಲಕನೇ! ನನಗೆ ತೀರ್ಪು ನೀಡುವ ಶಕ್ತಿಯನ್ನು ನೀಡು ಮತ್ತು ನನ್ನನ್ನು ನೀತಿವಂತರಲ್ಲಿ ಸೇರಿಸು.
26 : 84
وَٱجْعَل لِّى لِسَانَ صِدْقٍ فِى ٱلْـَٔاخِرِينَ
ಮುಂಬರುವ ತಲೆಮಾರುಗಳಲ್ಲಿ ನನಗೆ ಅತ್ಯುತ್ತಮ ಕೀರ್ತಿಯನ್ನು ಕರುಣಿಸು.
26 : 85
وَٱجْعَلْنِى مِن وَرَثَةِ جَنَّةِ ٱلنَّعِيمِ
ಸುಖ ಸಂತೋಷಗಳಿಂದ ಕೂಡಿದ ಸ್ವರ್ಗದ ವಾರಸುದಾರರಲ್ಲಿ ನನ್ನನ್ನು ಸೇರಿಸು.
26 : 86
وَٱغْفِرْ لِأَبِىٓ إِنَّهُۥ كَانَ مِنَ ٱلضَّآلِّينَ
ನನ್ನ ತಂದೆಯನ್ನು ಕ್ಷಮಿಸು. ನಿಜಕ್ಕೂ ಅವನು ದಾರಿತಪ್ಪಿದವರಲ್ಲಿ ಸೇರಿದ್ದಾನೆ.
26 : 87
وَلَا تُخْزِنِى يَوْمَ يُبْعَثُونَ
ಮನುಷ್ಯರಿಗೆ ಜೀವ ನೀಡಿ ಎಬ್ಬಿಸುವ ದಿನದಂದು ನನಗೆ ಅವಮಾನ ಮಾಡಬೇಡ.
26 : 88
يَوْمَ لَا يَنفَعُ مَالٌ وَلَا بَنُونَ
ಅಂದರೆ, ಆಸ್ತಿ ಮತ್ತು ಮಕ್ಕಳು ಯಾವುದೇ ಉಪಕಾರ ಮಾಡದ ದಿನ!
26 : 89
إِلَّا مَنْ أَتَى ٱللَّهَ بِقَلْبٍ سَلِيمٍ
ಪಾಪಮುಕ್ತ ಹೃದಯದೊಂದಿಗೆ ಅಲ್ಲಾಹನ ಬಳಿ ಬರುವವನ ಹೊರತು.
26 : 90
وَأُزْلِفَتِ ٱلْجَنَّةُ لِلْمُتَّقِينَ
ದೇವಭಯವುಳ್ಳವರಿಗೆ ಸ್ವರ್ಗವನ್ನು ಹತ್ತಿರಗೊಳಿಸಲಾಗುವುದು.
26 : 91
وَبُرِّزَتِ ٱلْجَحِيمُ لِلْغَاوِينَ
ದುರ್ಮಾರ್ಗಿಗಳಿಗೆ ನರಕವನ್ನು ತೆರೆದು ತೋರಿಸಲಾಗುವುದು.
26 : 92
وَقِيلَ لَهُمْ أَيْنَ مَا كُنتُمْ تَعْبُدُونَ
ಅವರೊಡನೆ ಕೇಳಲಾಗುವುದು: “ನೀವು ಆರಾಧಿಸುತ್ತಿದ್ದವರು ಎಲ್ಲಿ ಹೋದರು?
26 : 93
مِن دُونِ ٱللَّهِ هَلْ يَنصُرُونَكُمْ أَوْ يَنتَصِرُونَ
ಅಲ್ಲಾಹನನ್ನು ಬಿಟ್ಟು. ಅವರು ನಿಮಗೆ ಸಹಾಯ ಮಾಡುತ್ತಾರೆಯೇ? ಅಥವಾ ಅವರು ಅವರಿಗೇ ಸಹಾಯ ಮಾಡುವರೇ?”
26 : 94
فَكُبْكِبُوا۟ فِيهَا هُمْ وَٱلْغَاوُۥنَ
ಆದ್ದರಿಂದ ಅವರನ್ನು (ಆ ದೇವರುಗಳನ್ನು) ಮತ್ತು ದುರ್ಮಾರ್ಗಿಗಳನ್ನು ನರಕಾಗ್ನಿಗೆ ತಲೆಕೆಳಗಾಗಿ ಎಸೆಯಲಾಗುವುದು.
26 : 95
وَجُنُودُ إِبْلِيسَ أَجْمَعُونَ
ಮತ್ತು ಇಬ್ಲೀಸನ ಸಂಪೂರ್ಣ ಸೈನ್ಯವನ್ನು.
26 : 96
قَالُوا۟ وَهُمْ فِيهَا يَخْتَصِمُونَ
ಅಲ್ಲಿ ಅವರು ಪರಸ್ಪರ ತರ್ಕಿಸುತ್ತಾ ಹೇಳುವರು:
26 : 97
تَٱللَّهِ إِن كُنَّا لَفِى ضَلَـٰلٍ مُّبِينٍ
“ಅಲ್ಲಾಹನಾಣೆ! ನಿಜಕ್ಕೂ ನಾವು ಸ್ಪಷ್ಟವಾಗಿ ದಾರಿತಪ್ಪಿದ್ದೆವು.
26 : 98
إِذْ نُسَوِّيكُم بِرَبِّ ٱلْعَـٰلَمِينَ
ನಾವು ನಿಮ್ಮನ್ನು ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಸಮಾನರೆಂದು ಕಲ್ಪಿಸಿದಾಗ.
26 : 99
وَمَآ أَضَلَّنَآ إِلَّا ٱلْمُجْرِمُونَ
ಆ ಅಪರಾಧಿಗಳೇ ನಮ್ಮನ್ನು ದಾರಿತಪ್ಪಿಸಿದ್ದು.
26 : 100
فَمَا لَنَا مِن شَـٰفِعِينَ
ಈಗ ನಮಗೆ ಶಿಫಾರಸು ಮಾಡಲು ಯಾರೂ ಇಲ್ಲ.
26 : 101
وَلَا صَدِيقٍ حَمِيمٍ
ಆತ್ಮೀಯ ಮಿತ್ರರೂ ಇಲ್ಲ.
26 : 102
فَلَوْ أَنَّ لَنَا كَرَّةً فَنَكُونَ مِنَ ٱلْمُؤْمِنِينَ
ನಮಗೆ (ಇಹಲೋಕಕ್ಕೆ) ಮರಳಿ ಹೋಗುವ ಒಂದು ಅವಕಾಶವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು.”
26 : 103
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
26 : 104
وَإِنَّ رَبَّكَ لَهُوَ ٱلْعَزِيزُ ٱلرَّحِيمُ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
26 : 105
كَذَّبَتْ قَوْمُ نُوحٍ ٱلْمُرْسَلِينَ
ನೂಹರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು.
26 : 106
إِذْ قَالَ لَهُمْ أَخُوهُمْ نُوحٌ أَلَا تَتَّقُونَ
ಅವರೊಡನೆ ಅವರ ಸಹೋದರ ನೂಹ್ ಹೇಳಿದ ಸಂದರ್ಭ.“ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
26 : 107
إِنِّى لَكُمْ رَسُولٌ أَمِينٌ
ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
26 : 108
فَٱتَّقُوا۟ ٱللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
26 : 109
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
26 : 110
فَٱتَّقُوا۟ ٱللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.”
26 : 111
۞ قَالُوٓا۟ أَنُؤْمِنُ لَكَ وَٱتَّبَعَكَ ٱلْأَرْذَلُونَ
ಅವರು ಹೇಳಿದರು: “ನಾವು ನಿನ್ನನ್ನು ಅನುಸರಿಸಬೇಕೇ? ನಿನ್ನ ಹಿಂದೆಯಿರುವುದು ಕೆಳವರ್ಗದ ಜನರು ಮಾತ್ರ.”
26 : 112
قَالَ وَمَا عِلْمِى بِمَا كَانُوا۟ يَعْمَلُونَ
ನೂಹ್ ಹೇಳಿದರು: “ಅವರು ಮೊದಲು ಏನು ಮಾಡುತ್ತಿದ್ದರೆಂದು ನನಗೇನು ಗೊತ್ತು?
26 : 113
إِنْ حِسَابُهُمْ إِلَّا عَلَىٰ رَبِّى ۖ لَوْ تَشْعُرُونَ
ಅವರನ್ನು ವಿಚಾರಣೆ ಮಾಡಬೇಕಾದ ಹೊಣೆ ನನ್ನ ಪರಿಪಾಲಕನದ್ದು (ಅಲ್ಲಾಹನದ್ದು). ನಿಮಗೆ ಹಾಗೆ ಅನ್ನಿಸುತ್ತಿದ್ದರೆ!
26 : 114
وَمَآ أَنَا۠ بِطَارِدِ ٱلْمُؤْمِنِينَ
ನಾನು ಸತ್ಯವಿಶ್ವಾಸಿಗಳನ್ನು ದೂರ ತಳ್ಳುವುದಿಲ್ಲ.
26 : 115
إِنْ أَنَا۠ إِلَّا نَذِيرٌ مُّبِينٌ
ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರ.”
26 : 116
قَالُوا۟ لَئِن لَّمْ تَنتَهِ يَـٰنُوحُ لَتَكُونَنَّ مِنَ ٱلْمَرْجُومِينَ
ಅವರು ಹೇಳಿದರು: “ಓ ನೂಹ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುವೆವು.”
26 : 117
قَالَ رَبِّ إِنَّ قَوْمِى كَذَّبُونِ
ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನನ್ನ ಜನರು ನನ್ನನ್ನು ನಿಷೇಧಿಸಿದ್ದಾರೆ.
26 : 118
فَٱفْتَحْ بَيْنِى وَبَيْنَهُمْ فَتْحًا وَنَجِّنِى وَمَن مَّعِىَ مِنَ ٱلْمُؤْمِنِينَ
ಆದ್ದರಿಂದ ನನ್ನ ಮತ್ತು ಅವರ ನಡುವೆ ನಿರ್ಣಾಯಕವಾದ ತೀರ್ಪನ್ನು ನೀಡು. ನನ್ನನ್ನು ಮತ್ತು ನನ್ನ ಜೊತೆಯಲ್ಲಿರುವ ಸತ್ಯವಿಶ್ವಾಸಿಗಳನ್ನು ರಕ್ಷಿಸು.”
26 : 119
فَأَنجَيْنَـٰهُ وَمَن مَّعَهُۥ فِى ٱلْفُلْكِ ٱلْمَشْحُونِ
ಆಗ ನಾವು ಅವರನ್ನು ಮತ್ತು ಅವರ ಜೊತೆಯಲ್ಲಿದ್ದವರನ್ನು ತುಂಬಿ ತುಳುಕುವ ನಾವೆಯಲ್ಲಿ ರಕ್ಷಿಸಿದೆವು.
26 : 120
ثُمَّ أَغْرَقْنَا بَعْدُ ٱلْبَاقِينَ
ನಂತರ, ಉಳಿದವರನ್ನು ಮುಳುಗಿಸಿ ಕೊಂದೆವು.
26 : 121
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
26 : 122
وَإِنَّ رَبَّكَ لَهُوَ ٱلْعَزِيزُ ٱلرَّحِيمُ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
26 : 123
كَذَّبَتْ عَادٌ ٱلْمُرْسَلِينَ
ಆದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು.
26 : 124
إِذْ قَالَ لَهُمْ أَخُوهُمْ هُودٌ أَلَا تَتَّقُونَ
ಅವರೊಡನೆ ಅವರ ಸಹೋದರ ಹೂದ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
26 : 125
إِنِّى لَكُمْ رَسُولٌ أَمِينٌ
ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
26 : 126
فَٱتَّقُوا۟ ٱللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
26 : 127
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
26 : 128
أَتَبْنُونَ بِكُلِّ رِيعٍ ءَايَةً تَعْبَثُونَ
ನೀವು ಎಲ್ಲಾ ಗುಡ್ಡಗಳಲ್ಲೂ ಮೋಜು ಮಸ್ತಿಗಾಗಿ ನಿಶಾನಿಗಳನ್ನು (ಕಟ್ಟಡಗಳನ್ನು) ನಿರ್ಮಿಸುತ್ತಿದ್ದೀರಾ?
26 : 129
وَتَتَّخِذُونَ مَصَانِعَ لَعَلَّكُمْ تَخْلُدُونَ
ನೀವು ಮಹಾ ರಚನೆಗಳನ್ನು (ಭವ್ಯ ಸೌಧಗಳನ್ನು) ನಿರ್ಮಿಸುತ್ತಿದ್ದೀರಾ? ನೀವು ಇಲ್ಲೇ ಶಾಶ್ವತವಾಗಿ ವಾಸಿಸುವಿರಿ ಎಂಬ ಕಲ್ಪನೆಯಲ್ಲಿ?
26 : 130
وَإِذَا بَطَشْتُم بَطَشْتُمْ جَبَّارِينَ
ನೀವು ಯಾರನ್ನಾದರೂ ಹಿಡಿಯುವಾಗ ಬಹಳ ಕಠೋರವಾಗಿ ಹಿಡಿಯುತ್ತೀರಿ.
26 : 131
فَٱتَّقُوا۟ ٱللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
26 : 132
وَٱتَّقُوا۟ ٱلَّذِىٓ أَمَدَّكُم بِمَا تَعْلَمُونَ
ನಿಮಗೆ ತಿಳಿದೇ ಇರುವ ವಸ್ತುಗಳ ಮೂಲಕ ನಿಮಗೆ ಸಹಾಯ ಮಾಡಿದವನನ್ನು (ಅಲ್ಲಾಹನನ್ನು) ಭಯಪಡಿರಿ.
26 : 133
أَمَدَّكُم بِأَنْعَـٰمٍ وَبَنِينَ
ಅವನು ನಿಮಗೆ ಜಾನುವಾರುಗಳು ಮತ್ತು ಮಕ್ಕಳು-ಮರಿಗಳನ್ನು ನೀಡಿ ಸಹಾಯ ಮಾಡಿದ್ದಾನೆ.
26 : 134
وَجَنَّـٰتٍ وَعُيُونٍ
ತೋಟಗಳು ಮತ್ತು ಚಿಲುಮೆಗಳನ್ನು ನೀಡಿ.
26 : 135
إِنِّىٓ أَخَافُ عَلَيْكُمْ عَذَابَ يَوْمٍ عَظِيمٍ
ಆ ಭಯಾನಕ ದಿನದ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ.”
26 : 136
قَالُوا۟ سَوَآءٌ عَلَيْنَآ أَوَعَظْتَ أَمْ لَمْ تَكُن مِّنَ ٱلْوَٰعِظِينَ
ಅವರು ಹೇಳಿದರು: “ನೀನು ನಮಗೆ ಉಪದೇಶ ಮಾಡಿದರೂ ಅಥವಾ ಉಪದೇಶ ಮಾಡದಿದ್ದರೂ ನಮ್ಮ ಮಟ್ಟಿಗೆ ಅದು ಸಮಾನವಾಗಿದೆ.
26 : 137
إِنْ هَـٰذَآ إِلَّا خُلُقُ ٱلْأَوَّلِينَ
ಇದು ಪ್ರಾಚೀನ ಕಾಲದ ಜನರ ವರ್ತನೆಯಾಗಿದೆ.
26 : 138
وَمَا نَحْنُ بِمُعَذَّبِينَ
ನಾವು ಎಂದಿಗೂ ಶಿಕ್ಷೆಗೆ ಗುರಿಯಾಗುವುದಿಲ್ಲ.”
26 : 139
فَكَذَّبُوهُ فَأَهْلَكْنَـٰهُمْ ۗ إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
ಅವರು ಹೂದರನ್ನು ನಿಷೇಧಿಸಿದರು. ಆದ್ದರಿಂದ ನಾವು ಅವರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
26 : 140
وَإِنَّ رَبَّكَ لَهُوَ ٱلْعَزِيزُ ٱلرَّحِيمُ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
26 : 141
كَذَّبَتْ ثَمُودُ ٱلْمُرْسَلِينَ
ಸಮೂದ್ ಗೋತ್ರದವರು ಸಂದೇಶವಾಹಕರುಗಳನ್ನು ನಿಷೇಧಿಸಿದರು.
26 : 142
إِذْ قَالَ لَهُمْ أَخُوهُمْ صَـٰلِحٌ أَلَا تَتَّقُونَ
ಅವರೊಡನೆ ಅವರ ಸಹೋದರ ಸಾಲಿಹ್ ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
26 : 143
إِنِّى لَكُمْ رَسُولٌ أَمِينٌ
ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
26 : 144
فَٱتَّقُوا۟ ٱللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
26 : 145
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
26 : 146
أَتُتْرَكُونَ فِى مَا هَـٰهُنَآ ءَامِنِينَ
ಇಲ್ಲಿರುವ ವಸ್ತುಗಳೊಂದಿಗೆ ನಿರ್ಭಯದಿಂದ ಜೀವಿಸಲು ನಿಮ್ಮನ್ನು ಬಿಟ್ಟುಬಿಡಲಾಗುವುದೇ?
26 : 147
فِى جَنَّـٰتٍ وَعُيُونٍ
ಅಂದರೆ ಈ ತೋಟಗಳು ಮತ್ತು ಕಾಲುವೆಗಳೊಂದಿಗೆ.
26 : 148
وَزُرُوعٍ وَنَخْلٍ طَلْعُهَا هَضِيمٌ
ಈ ಹೊಲಗಳು ಮತ್ತು ಮೃದು ಹಾಗೂ ರುಚಿಯಾದ ಹಣ್ಣುಗಳಿರುವ ಖರ್ಜೂರದ ಮರಗಳೊಂದಿಗೆ.
26 : 149
وَتَنْحِتُونَ مِنَ ٱلْجِبَالِ بُيُوتًا فَـٰرِهِينَ
ನೀವು ಕೌಶಲ್ಯದಿಂದ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತೀರಿ.
26 : 150
فَٱتَّقُوا۟ ٱللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
26 : 151
وَلَا تُطِيعُوٓا۟ أَمْرَ ٱلْمُسْرِفِينَ
ಹದ್ದು ಮೀರಿದವರ ಆಜ್ಞೆಗಳನ್ನು ಅನುಸರಿಸಬೇಡಿ.
26 : 152
ٱلَّذِينَ يُفْسِدُونَ فِى ٱلْأَرْضِ وَلَا يُصْلِحُونَ
ಅವರು ಯಾರೆಂದರೆ, ಭೂಮಿಯಲ್ಲಿ ಕಿಡಿಗೇಡಿತನ ಮಾಡುವವರು; ಸುಧಾರಣೆ ಮಾಡದವರು.”
26 : 153
قَالُوٓا۟ إِنَّمَآ أَنتَ مِنَ ٱلْمُسَحَّرِينَ
ಅವರು ಹೇಳಿದರು: “ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ.
26 : 154
مَآ أَنتَ إِلَّا بَشَرٌ مِّثْلُنَا فَأْتِ بِـَٔايَةٍ إِن كُنتَ مِنَ ٱلصَّـٰدِقِينَ
ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನೀನು ಸತ್ಯವನ್ನೇ ಹೇಳುತ್ತಿದ್ದರೆ ಯಾವುದಾದರೂ ದೃಷ್ಟಾಂತವನ್ನು ತಂದು ತೋರಿಸು.”
26 : 155
قَالَ هَـٰذِهِۦ نَاقَةٌ لَّهَا شِرْبٌ وَلَكُمْ شِرْبُ يَوْمٍ مَّعْلُومٍ
ಸಾಲಿಹ್ ಹೇಳಿದರು: “ನೋಡಿ! ಇದು ಒಂಟೆ. ಇದಕ್ಕೆ ನೀರು ಕುಡಿಯಲು ಒಂದು ಸರದಿಯಿದೆ. ನಿಮಗೂ ಕೂಡ ನೀರು ಕುಡಿಯುವ ಒಂದು ನಿಶ್ಚಿತ ದಿನವಿದೆ.
26 : 156
وَلَا تَمَسُّوهَا بِسُوٓءٍ فَيَأْخُذَكُمْ عَذَابُ يَوْمٍ عَظِيمٍ
ಆದ್ದರಿಂದ ಇದಕ್ಕೆ ಯಾವುದೇ ತೊಂದರೆ ಕೊಡಬೇಡಿ. ಹಾಗೇನಾದರೂ ಆದರೆ ಭಯಾನಕ ದಿನದ ಶಿಕ್ಷೆಯು ನಿಮ್ಮನ್ನು ಹಿಡಿಯುವುದು.”
26 : 157
فَعَقَرُوهَا فَأَصْبَحُوا۟ نَـٰدِمِينَ
ಆದರೂ ಅವರು ಅದರ ಕಾಲುಗಳನ್ನು ಕಡಿದು ಸಾಯಿಸಿದರು. ನಂತರ (ಶಿಕ್ಷೆಯನ್ನು ಕಂಡಾಗ) ಅವರು ಮರುಗಿದರು.
26 : 158
فَأَخَذَهُمُ ٱلْعَذَابُ ۗ إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
ಶಿಕ್ಷೆಯು ಅವರನ್ನು ಹಿಡಿದು ಬಿಟ್ಟಿತು. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
26 : 159
وَإِنَّ رَبَّكَ لَهُوَ ٱلْعَزِيزُ ٱلرَّحِيمُ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
26 : 160
كَذَّبَتْ قَوْمُ لُوطٍ ٱلْمُرْسَلِينَ
ಲೂತರ ಜನರು ಸಂದೇಶವಾಹಕರುಗಳನ್ನು ನಿಷೇಧಿಸಿದರು.
26 : 161
إِذْ قَالَ لَهُمْ أَخُوهُمْ لُوطٌ أَلَا تَتَّقُونَ
ಅವರೊಡನೆ ಅವರ ಸಹೋದರ ಲೂತ್ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
26 : 162
إِنِّى لَكُمْ رَسُولٌ أَمِينٌ
ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
26 : 163
فَٱتَّقُوا۟ ٱللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
26 : 164
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
26 : 165
أَتَأْتُونَ ٱلذُّكْرَانَ مِنَ ٱلْعَـٰلَمِينَ
ನೀವು (ತೆವಲು ತೀರಿಸಿಕೊಳ್ಳಲು) ಸರ್ವಲೋಕದವರ ಪೈಕಿ ಕೇವಲ ಪುರುಷರ ಬಳಿಗೆ ಹೋಗುತ್ತೀರಾ?
26 : 166
وَتَذَرُونَ مَا خَلَقَ لَكُمْ رَبُّكُم مِّنْ أَزْوَٰجِكُم ۚ بَلْ أَنتُمْ قَوْمٌ عَادُونَ
ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೋಸ್ಕರ ಸೃಷ್ಟಿಸಿದ ನಿಮ್ಮ ಪತ್ನಿಯರನ್ನು ಬಿಟ್ಟುಬಿಡುತ್ತೀರಾ? ಅಲ್ಲ, ವಾಸ್ತವವಾಗಿ ನೀವು ಹದ್ದು ಮೀರಿದ ಜನರಾಗಿದ್ದೀರಿ.”
26 : 167
قَالُوا۟ لَئِن لَّمْ تَنتَهِ يَـٰلُوطُ لَتَكُونَنَّ مِنَ ٱلْمُخْرَجِينَ
ಅವರು ಹೇಳಿದರು: “ಓ ಲೂತ್! ನೀನು ಇದನ್ನು ನಿಲ್ಲಿಸದಿದ್ದರೆ ನಾವು ನಿನ್ನನ್ನು ಖಂಡಿತ ಊರಿನಿಂದ ಓಡಿಸುವೆವು.”
26 : 168
قَالَ إِنِّى لِعَمَلِكُم مِّنَ ٱلْقَالِينَ
ಲೂತ್ ಹೇಳಿದರು: “ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಈ ಕೃತ್ಯವನ್ನು ನಾನು ಬಹಳ ದ್ವೇಷಿಸುತ್ತೇನೆ.
26 : 169
رَبِّ نَجِّنِى وَأَهْلِى مِمَّا يَعْمَلُونَ
ಓ ನನ್ನ ಪರಿಪಾಲಕನೇ! ನನ್ನನ್ನು ಮತ್ತು ನನ್ನ ಕುಟುಂಬವನ್ನು ಇವರು ಮಾಡುವ ಈ ಕೃತ್ಯದಿಂದ ರಕ್ಷಿಸು.”
26 : 170
فَنَجَّيْنَـٰهُ وَأَهْلَهُۥٓ أَجْمَعِينَ
ಆದ್ದರಿಂದ ನಾವು ಅವರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿಸಿದೆವು.
26 : 171
إِلَّا عَجُوزًا فِى ٱلْغَـٰبِرِينَ
ಒಬ್ಬ ಮುದುಕಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರಿದಳು.
26 : 172
ثُمَّ دَمَّرْنَا ٱلْـَٔاخَرِينَ
ನಂತರ ನಾವು ಅವರೆಲ್ಲರನ್ನೂ ನಾಶ ಮಾಡಿದೆವು.
26 : 173
وَأَمْطَرْنَا عَلَيْهِم مَّطَرًا ۖ فَسَآءَ مَطَرُ ٱلْمُنذَرِينَ
ನಾವು ಅವರ ಮೇಲೆ ಒಂದು ವಿಶೇಷ ಮಳೆಯನ್ನು ಸುರಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಸುರಿದ ಆ ಮಳೆಯು ಬಹಳ ನಿಕೃಷ್ಟವಾಗಿದೆ.
26 : 174
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
26 : 175
وَإِنَّ رَبَّكَ لَهُوَ ٱلْعَزِيزُ ٱلرَّحِيمُ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
26 : 176
كَذَّبَ أَصْحَـٰبُ لْـَٔيْكَةِ ٱلْمُرْسَلِينَ
ಐಕತ್‌ನ ಜನರು (ಮದ್ಯನ್ ದೇಶದವರು) ಸಂದೇಶವಾಹಕರುಗಳನ್ನು ನಿಷೇಧಿಸಿದರು.
26 : 177
إِذْ قَالَ لَهُمْ شُعَيْبٌ أَلَا تَتَّقُونَ
ಅವರೊಡನೆ ಶುಐಬರು ಕೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?
26 : 178
إِنِّى لَكُمْ رَسُولٌ أَمِينٌ
ನಿಜಕ್ಕೂ ನಾನು ನಿಮ್ಮ ಬಳಿಗೆ ಕಳುಹಿಸಲಾದ ಒಬ್ಬ ಪ್ರಾಮಾಣಿಕ ಸಂದೇಶವಾಹಕನಾಗಿದ್ದೇನೆ.
26 : 179
فَٱتَّقُوا۟ ٱللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
26 : 180
وَمَآ أَسْـَٔلُكُمْ عَلَيْهِ مِنْ أَجْرٍ ۖ إِنْ أَجْرِىَ إِلَّا عَلَىٰ رَبِّ ٱلْعَـٰلَمِينَ
ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಸರ್ವಲೋಕಗಳ ಪರಿಪಾಲಕನು (ಅಲ್ಲಾಹು) ಮಾತ್ರ.
26 : 181
۞ أَوْفُوا۟ ٱلْكَيْلَ وَلَا تَكُونُوا۟ مِنَ ٱلْمُخْسِرِينَ
ಅಳತೆಯನ್ನು ಪೂರ್ತಿಯಾಗಿ ಕೊಡಿ. ಜನರಿಗೆ ನಷ್ಟ ಮಾಡುವವರಲ್ಲಿ ಸೇರಬೇಡಿ.
26 : 182
وَزِنُوا۟ بِٱلْقِسْطَاسِ ٱلْمُسْتَقِيمِ
ಸರಿಯಾದ ತಕ್ಕಡಿಯಲ್ಲಿ ತೂಕ ಮಾಡಿರಿ.
26 : 183
وَلَا تَبْخَسُوا۟ ٱلنَّاسَ أَشْيَآءَهُمْ وَلَا تَعْثَوْا۟ فِى ٱلْأَرْضِ مُفْسِدِينَ
ಜನರಿಗೆ ಅವರ ವಸ್ತುಗಳನ್ನು ಕಡಿಮೆ ಮಾಡಬೇಡಿ. ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲೆಯಬೇಡಿ.
26 : 184
وَٱتَّقُوا۟ ٱلَّذِى خَلَقَكُمْ وَٱلْجِبِلَّةَ ٱلْأَوَّلِينَ
ನಿಮ್ಮನ್ನು ಮತ್ತು ನಿಮಗಿಂತ ಮೊದಲಿನ ಜನರನ್ನು ಸೃಷ್ಟಿಸಿದ ಅಲ್ಲಾಹನನ್ನು ಭಯಪಡಿರಿ.”
26 : 185
قَالُوٓا۟ إِنَّمَآ أَنتَ مِنَ ٱلْمُسَحَّرِينَ
ಅವರು ಹೇಳಿದರು: “ನಿಶ್ಚಯವಾಗಿಯೂ ನೀನು ಮಾಟ ಬಾಧಿತ ಜನರಲ್ಲಿ ಒಬ್ಬನಾಗಿರುವೆ.
26 : 186
وَمَآ أَنتَ إِلَّا بَشَرٌ مِّثْلُنَا وَإِن نَّظُنُّكَ لَمِنَ ٱلْكَـٰذِبِينَ
ನೀನು ನಮ್ಮಂತಿರುವ ಒಬ್ಬ ಮನುಷ್ಯನಲ್ಲದೆ ಇನ್ನೇನೂ ಅಲ್ಲ. ನಿಶ್ಚಯವಾಗಿಯೂ ನೀನು ಸುಳ್ಳು ಹೇಳುತ್ತಿದ್ದೀಯೆಂದೇ ನಾವು ಭಾವಿಸುತ್ತೇವೆ.
26 : 187
فَأَسْقِطْ عَلَيْنَا كِسَفًا مِّنَ ٱلسَّمَآءِ إِن كُنتَ مِنَ ٱلصَّـٰدِقِينَ
ನೀನು ಹೇಳುವುದು ನಿಜವೇ ಆಗಿದ್ದರೆ ಆಕಾಶದಿಂದ (ನಮ್ಮ ಮೇಲೆ) ತುಣುಕುಗಳು ಬೀಳುವಂತೆ ಮಾಡು.”
26 : 188
قَالَ رَبِّىٓ أَعْلَمُ بِمَا تَعْمَلُونَ
ಶುಐಬ್ ಹೇಳಿದರು: “ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನನ್ನ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ.”
26 : 189
فَكَذَّبُوهُ فَأَخَذَهُمْ عَذَابُ يَوْمِ ٱلظُّلَّةِ ۚ إِنَّهُۥ كَانَ عَذَابَ يَوْمٍ عَظِيمٍ
ಅವರು ಶುಐಬರನ್ನು ನಿಷೇಧಿಸಿದರು. ಆದ್ದರಿಂದ ಮೋಡದ ನೆರಳು ಮುಸುಕಿದ ದಿನದ ಶಿಕ್ಷೆಯು ಅವರನ್ನು ಹಿಡಿಯಿತು. ನಿಜಕ್ಕೂ ಅದೊಂದು ಭಯಾನಕ ದಿನದ ಶಿಕ್ಷೆಯಾಗಿತ್ತು.
26 : 190
إِنَّ فِى ذَٰلِكَ لَـَٔايَةً ۖ وَمَا كَانَ أَكْثَرُهُم مُّؤْمِنِينَ
ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೂ ಅವರಲ್ಲಿ ಹೆಚ್ಚಿನವರು ಸತ್ಯವಿಶ್ವಾಸಿಗಳಾಗಿಲ್ಲ.
26 : 191
وَإِنَّ رَبَّكَ لَهُوَ ٱلْعَزِيزُ ٱلرَّحِيمُ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
26 : 192
وَإِنَّهُۥ لَتَنزِيلُ رَبِّ ٱلْعَـٰلَمِينَ
ನಿಶ್ಚಯವಾಗಿಯೂ ಈ ಕುರ್‌ಆನ್ ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ.
26 : 193
نَزَلَ بِهِ ٱلرُّوحُ ٱلْأَمِينُ
ವಿಶ್ವಸ್ತ ಆತ್ಮ (ಜಿಬ್ರೀಲ್) ಇದರೊಂದಿಗೆ ಇಳಿದು ಬಂದಿದ್ದಾರೆ.
26 : 194
عَلَىٰ قَلْبِكَ لِتَكُونَ مِنَ ٱلْمُنذِرِينَ
ನಿಮ್ಮ (ಪ್ರವಾದಿಯ) ಹೃದಯಕ್ಕೆ. ನೀವು ಮುನ್ನೆಚ್ಚರಿಕೆ ನೀಡುವವರಲ್ಲಿ ಸೇರಲೆಂದು.
26 : 195
بِلِسَانٍ عَرَبِىٍّ مُّبِينٍ
ಸ್ಪಷ್ಟ ಅರಬ್ಬಿ ಭಾಷೆಯಲ್ಲಿ.
26 : 196
وَإِنَّهُۥ لَفِى زُبُرِ ٱلْأَوَّلِينَ
ನಿಶ್ಚಯವಾಗಿಯೂ ಪೂರ್ವಕಾಲದವರ ಗ್ರಂಥಗಳಲ್ಲಿ ಇದರ ಬಗ್ಗೆ ಉಲ್ಲೇಖವಿದೆ.
26 : 197
أَوَلَمْ يَكُن لَّهُمْ ءَايَةً أَن يَعْلَمَهُۥ عُلَمَـٰٓؤُا۟ بَنِىٓ إِسْرَٰٓءِيلَ
ಇಸ್ರಾಯೇಲ್ ಮಕ್ಕಳಲ್ಲಿರುವ ವಿದ್ವಾಂಸರು ಕೂಡ ಇದರ ಸತ್ಯತೆಯನ್ನು ತಿಳಿದಿದ್ದಾರೆ ಎನ್ನುವುದು ಇವರಿಗೆ (ಸತ್ಯನಿಷೇಧಿಗಳಿಗೆ) ಒಂದು ದೃಷ್ಟಾಂತವಾಗುವುದಿಲ್ಲವೇ?
26 : 198
وَلَوْ نَزَّلْنَـٰهُ عَلَىٰ بَعْضِ ٱلْأَعْجَمِينَ
ನಾವು ಅದನ್ನು ಅರಬ್ಬೇತರ ವ್ಯಕ್ತಿಗೆ ಅವತೀರ್ಣಗೊಳಿಸಿ,
26 : 199
فَقَرَأَهُۥ عَلَيْهِم مَّا كَانُوا۟ بِهِۦ مُؤْمِنِينَ
ನಂತರ ಆತ ಅದನ್ನು ಇವರಿಗೆ ಓದಿಕೊಟ್ಟರೂ ಇವರು ಅದರಲ್ಲಿ ವಿಶ್ವಾಸವಿಡುವುದಿಲ್ಲ.
26 : 200
كَذَٰلِكَ سَلَكْنَـٰهُ فِى قُلُوبِ ٱلْمُجْرِمِينَ
ಈ ರೀತಿ ನಾವು ಅಪರಾಧಿಗಳ ಹೃದಯಗಳಲ್ಲಿ ಅದನ್ನು (ಸತ್ಯನಿಷೇಧವನ್ನು) ತೂರಿಸಿದ್ದೇವೆ.
26 : 201
لَا يُؤْمِنُونَ بِهِۦ حَتَّىٰ يَرَوُا۟ ٱلْعَذَابَ ٱلْأَلِيمَ
ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ಅದರಲ್ಲಿ ವಿಶ್ವಾಸವಿಡುವುದಿಲ್ಲ.
26 : 202
فَيَأْتِيَهُم بَغْتَةً وَهُمْ لَا يَشْعُرُونَ
ಅದು ಹಠಾತ್ತನೆ ಅವರ ಬಳಿಗೆ ಬರುತ್ತದೆ. ಅವರು ಅದನ್ನು ನಿರೀಕ್ಷಿಸಿಯೇ ಇರುವುದಿಲ್ಲ.
26 : 203
فَيَقُولُوا۟ هَلْ نَحْنُ مُنظَرُونَ
ಅವರು ಕೇಳುತ್ತಾರೆ: “ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ?”
26 : 204
أَفَبِعَذَابِنَا يَسْتَعْجِلُونَ
ಹಾಗಾದರೆ ಅವರು ನಮ್ಮ ಶಿಕ್ಷೆಗಾಗಿ ತ್ವರೆ ಮಾಡುತ್ತಿದ್ದಾರೆಯೇ?
26 : 205
أَفَرَءَيْتَ إِن مَّتَّعْنَـٰهُمْ سِنِينَ
ನೀವು ಆಲೋಚಿಸಿ ನೋಡಿದ್ದೀರಾ? ನಾವು ಅವರಿಗೆ ಅನೇಕ ವರ್ಷಗಳ ತನಕ ಸವಲತ್ತುಗಳನ್ನು ನೀಡಿ,
26 : 206
ثُمَّ جَآءَهُم مَّا كَانُوا۟ يُوعَدُونَ
ನಂತರ ಅವರಿಗೆ ವಾಗ್ದಾನ ಮಾಡಲಾದ ಶಿಕ್ಷೆಯು ಅವರ ಬಳಿಗೆ ಬಂದರೆ,
26 : 207
مَآ أَغْنَىٰ عَنْهُم مَّا كَانُوا۟ يُمَتَّعُونَ
ಅವರಿಗೆ ನೀಡಲಾದ ಯಾವುದೇ ಸವಲತ್ತುಗಳು ಅವರಿಗೆ ಪ್ರಯೋಜನ ನೀಡುವುದಿಲ್ಲ.
26 : 208
وَمَآ أَهْلَكْنَا مِن قَرْيَةٍ إِلَّا لَهَا مُنذِرُونَ
ನಾವು ಯಾವುದೇ ಊರನ್ನು, ಅದಕ್ಕೆ ಮುನ್ನೆಚ್ಚರಿಕೆ ನೀಡುವವರನ್ನು (ಪ್ರವಾದಿಗಳನ್ನು) ಕಳುಹಿಸಿದ ನಂತರವಲ್ಲದೆ ನಾಶ ಮಾಡಿಲ್ಲ.
26 : 209
ذِكْرَىٰ وَمَا كُنَّا ظَـٰلِمِينَ
ಇದೊಂದು ಉಪದೇಶ ಮಾತ್ರ. ನಾವು ಎಂದಿಗೂ ಅನ್ಯಾಯ ಮಾಡುವುದಿಲ್ಲ.
26 : 210
وَمَا تَنَزَّلَتْ بِهِ ٱلشَّيَـٰطِينُ
ಶೈತಾನರು ಈ ಕುರ್‌ಆನನ್ನು ತಂದಿಲ್ಲ.
26 : 211
وَمَا يَنۢبَغِى لَهُمْ وَمَا يَسْتَطِيعُونَ
ಅದು ಅವರಿಗೆ ಯೋಗ್ಯವೂ ಅಲ್ಲ. ಅವರಿಗೆ ಅಂತಹ ಸಾಮರ್ಥ್ಯವೂ ಇಲ್ಲ.
26 : 212
إِنَّهُمْ عَنِ ٱلسَّمْعِ لَمَعْزُولُونَ
ವಾಸ್ತವವಾಗಿ, ಅವರನ್ನು (ದೇವವಾಣಿಗೆ) ಕಿವಿಗೊಡದಂತೆ ದೂರ ಸರಿಸಲಾಗಿದೆ.
26 : 213
فَلَا تَدْعُ مَعَ ٱللَّهِ إِلَـٰهًا ءَاخَرَ فَتَكُونَ مِنَ ٱلْمُعَذَّبِينَ
ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸಬೇಡಿ. ಹಾಗೇನಾದರೂ ಆದರೆ ನೀವು ಶಿಕ್ಷಗೆ ಗುರಿಯಾದವರಲ್ಲಿ ಸೇರುವಿರಿ.
26 : 214
وَأَنذِرْ عَشِيرَتَكَ ٱلْأَقْرَبِينَ
ನಿಮ್ಮ ಹತ್ತಿರದ ಸಂಬಂಧಿಕರಿಗೆ ಎಚ್ಚರಿಕೆ ನೀಡಿರಿ.
26 : 215
وَٱخْفِضْ جَنَاحَكَ لِمَنِ ٱتَّبَعَكَ مِنَ ٱلْمُؤْمِنِينَ
ನಿಮ್ಮನ್ನು ಅನುಸರಿಸಿದ ಸತ್ಯವಿಶ್ವಾಸಿಗಳಿಗೆ ನಿಮ್ಮ ರೆಕ್ಕೆಯನ್ನು ತಗ್ಗಿಸಿಕೊಡಿ (ಅವರೊಡನೆ ಸೌಮ್ಯವಾಗಿ ವರ್ತಿಸಿ).
26 : 216
فَإِنْ عَصَوْكَ فَقُلْ إِنِّى بَرِىٓءٌ مِّمَّا تَعْمَلُونَ
ಅವರು ನಿಮ್ಮ ಮಾತನ್ನು ಕೇಳದಿದ್ದರೆ, ಹೇಳಿರಿ: “ನೀವು ಮಾಡುವ ಕರ್ಮಗಳಿಗೆ ನಾನು ಹೊಣೆಯಲ್ಲ.”
26 : 217
وَتَوَكَّلْ عَلَى ٱلْعَزِيزِ ٱلرَّحِيمِ
ಪ್ರಬಲನು ಮತ್ತು ದಯೆ ತೋರುವವನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡಿ.
26 : 218
ٱلَّذِى يَرَىٰكَ حِينَ تَقُومُ
ಅವನು ಯಾರೆಂದರೆ, ನೀವು ನಿಲ್ಲುವಾಗ ನಿಮ್ಮನ್ನು ನೋಡುವವನು.
26 : 219
وَتَقَلُّبَكَ فِى ٱلسَّـٰجِدِينَ
ಸಾಷ್ಟಾಂಗ ಮಾಡುವವರ ಜೊತೆಗಿನ ತಮ್ಮ ಚಲನವಲನಗಳನ್ನೂ ಕೂಡ.
26 : 220
إِنَّهُۥ هُوَ ٱلسَّمِيعُ ٱلْعَلِيمُ
ನಿಶ್ಚಯವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಸರ್ವಜ್ಞನಾಗಿದ್ದಾನೆ.
26 : 221
هَلْ أُنَبِّئُكُمْ عَلَىٰ مَن تَنَزَّلُ ٱلشَّيَـٰطِينُ
ಶೈತಾನರು ಯಾರ ಮೇಲೆ ಇಳಿಯುತ್ತಾರೆಂದು ನಾನು ನಿಮಗೆ ತಿಳಿಸಿಕೊಡಲೇ?
26 : 222
تَنَزَّلُ عَلَىٰ كُلِّ أَفَّاكٍ أَثِيمٍ
ಪ್ರತಿಯೊಬ್ಬ ಸುಳ್ಳುಗಾರ ಪಾಪಿಯ ಮೇಲೆ ಅವರು ಇಳಿಯುತ್ತಾರೆ.
26 : 223
يُلْقُونَ ٱلسَّمْعَ وَأَكْثَرُهُمْ كَـٰذِبُونَ
ಅವರು ಕೇಳಿದ್ದೆಲ್ಲವನ್ನೂ ತಲುಪಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಸುಳ್ಳರಾಗಿದ್ದಾರೆ.
26 : 224
وَٱلشُّعَرَآءُ يَتَّبِعُهُمُ ٱلْغَاوُۥنَ
ಕವಿಗಳನ್ನು ದುರ್ಮಾರ್ಗಿಗಳು ಹಿಂಬಾಲಿಸುತ್ತಾರೆ.
26 : 225
أَلَمْ تَرَ أَنَّهُمْ فِى كُلِّ وَادٍ يَهِيمُونَ
ಅವರು (ಕವಿಗಳು) ಎಲ್ಲ ಕಣಿವೆಗಳಲ್ಲೂ ವಿಹರಿಸುವುದನ್ನು ನೀವು ನೋಡಿಲ್ಲವೇ?
26 : 226
وَأَنَّهُمْ يَقُولُونَ مَا لَا يَفْعَلُونَ
ಅವರು ಮಾಡದ ಕೆಲಸಗಳನ್ನು ಅವರು ಹೇಳುತ್ತಾರೆ.
26 : 227
إِلَّا ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ وَذَكَرُوا۟ ٱللَّهَ كَثِيرًا وَٱنتَصَرُوا۟ مِنۢ بَعْدِ مَا ظُلِمُوا۟ ۗ وَسَيَعْلَمُ ٱلَّذِينَ ظَلَمُوٓا۟ أَىَّ مُنقَلَبٍ يَنقَلِبُونَ
ಆದರೆ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವವರು, ಮರ್ದನಕ್ಕೊಳಗಾದ ಬಳಿಕ ಪ್ರತೀಕಾರ ಪಡೆಯುವವರು ಇದರಿಂದ ಹೊರತಾಗಿದ್ದಾರೆ. ಅಕ್ರಮವೆಸಗಿದವರು ಸದ್ಯವೇ ಅವರು ಯಾವ ಸ್ಥಳಕ್ಕೆ ಮರಳಲಿದ್ದಾರೆಂದು ತಿಳಿದುಕೊಳ್ಳುವರು.