114 : 1
قُلْ أَعُوذُ بِرَبِّ ٱلنَّاسِ
ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ.
114 : 2
مَلِكِ ٱلنَّاسِ
ಮನುಷ್ಯರ ಒಡೆಯನಲ್ಲಿ.
114 : 3
إِلَـٰهِ ٱلنَّاسِ
ಮನುಷ್ಯರ ದೇವನಲ್ಲಿ.
114 : 4
مِن شَرِّ ٱلْوَسْوَاسِ ٱلْخَنَّاسِ
ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ (ಪಿಶಾಚಿಗಳ) ಕೆಡುಕಿನಿಂದ.
114 : 5
ٱلَّذِى يُوَسْوِسُ فِى صُدُورِ ٱلنَّاسِ
ಅವರು ಯಾರೆಂದರೆ, ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು.
114 : 6
مِنَ ٱلْجِنَّةِ وَٱلنَّاسِ
ಅವರು ಜಿನ್ನ್‌ಗಳಲ್ಲಿ ಮತ್ತು ಮನುಷ್ಯರಲ್ಲಿ ಸೇರಿದವರು.”